Yash: ಬ್ಲೇಸರ್ ಹಾಕಿ ತಲೆಗೆ ಟವೆಲ್ ಕಟ್ಟಿ ಬಂದ ರಾಕಿಂಗ್ ಸ್ಟಾರ್..! ಹೊಸ ಲುಕ್‌ಗೆ ವಾವ್ಹ್ ಟಾಕ್ಸಿಕ್‌ ಎಂದ ಫ್ಯಾನ್ಸ್‌..!

Yash: ಬ್ಲೇಸರ್ ಹಾಕಿ ತಲೆಗೆ ಟವೆಲ್ ಕಟ್ಟಿ ಬಂದ ರಾಕಿಂಗ್ ಸ್ಟಾರ್..! ಹೊಸ ಲುಕ್‌ಗೆ ವಾವ್ಹ್ ಟಾಕ್ಸಿಕ್‌ ಎಂದ ಫ್ಯಾನ್ಸ್‌..!

Published : Mar 10, 2024, 09:20 AM ISTUpdated : Mar 10, 2024, 09:21 AM IST

ಸ್ಯಾಂಡಲ್‌ವುಡ್‌ನಲ್ಲಿ ಸ್ಟೈಲ್‌ಗೆ ಐಕಾನ್ ಯಾರು ಅಂತ ಕೇಳಿದ್ರೆ ಮೊದಲು ಬರೋ ಹೆಸ್ರು ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್. ಆದ್ರೆ ಈಗ ಟ್ರೆಂಡ್ ಆಗುತ್ತಿರೋದು ಕೆಜಿಎಫ್ ಕಿಂಗ್ ರಾಕಿಂಗ್ ಸ್ಟಾರ್ ಯಶ್. ಯಶ್ ಗಡ್ಡ ಬಿಟ್ಟಿದ್ದು ಟ್ರೆಂಡ್ ಆಗಿತ್ತು. ಕೆಜಿಎಫ್‌ನಲ್ಲಿ ಯಶ್ ಧರಿಸಿದ್ದ ಕಲರ್‌ಫುಲ್‌ ಬ್ಲೇಸರ್ಟ್ ಕೂಡ ಟಾಕ್ ಆಗಿತ್ತು. ಈಗ ಯಶ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಯಶ್ ಟಾಕ್ಸಿಕ್ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಮೂವಿಯಲ್ಲಿ ರಾಕಿ ಲುಕ್ ಹೇಗಿರುತ್ತೆ ಅನ್ನೋ ಕುತೂಹಲ ಫ್ಯಾನ್ಸ್‌ಗಿದೆ. ಆದ್ರೆ ಈಗ ಎಲ್ಲರ ಕಣ್ಣು ಬಿದ್ದಿರೋದು ರಾಕಿಯ ಈ ಹೊಸ ಲುಕ್(New Look) ಮೇಲೆ. ಉದ್ದನೆ ಗಡ್ಡ ಬಿಟ್ಟಿರೋ ಯಶ್(Yash) ಬ್ಲೇಸರ್ ಹಾಕಿಕೊಂಡು ಅದಕ್ಕೆ ಮ್ಯಾಚಿಂಗ್ ಆಗಿರೋ ಟವಲ್ ಅನ್ನ ತಲೆಗೆ ಕಟ್ಟಿಕೊಂಡು ಎಲ್ಲಾ ಕಡೆ ಓಡಾಡ್ತಿದ್ದಾರೆ. ಯಶ್‌ರ ಈ ನಯಾ ಲುಕ್ ನೋಡಿ ವಾವ್ಹ್ ಟಾಕ್ಸಿಕ್ ಎನ್ನುತ್ತಿದ್ದಾರೆ ಫ್ಯಾನ್ಸ್. ಯಶ್ ಈಗ ಎಲ್ಲೇ ಹೋದ್ರು ತಲೆಗೆ ಟರ್ಬನ್(Turban) ಕಟ್ಟುತ್ತಿದ್ದಾರೆ. ವಾರದ ಹಿಂದೆ ಬಳ್ಳಾರಿಯ ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಯಶ್ ಅಂದು ಕೂಡ ಯಲೆಗೆ ತ್ರಿಶೂಲವಿರೋ ಟರ್ಬನ್ ಕಟ್ಟಿದ್ರು. ಆ ಲುಕ್ ಕೂಡ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು. ಆದ್ರೆ ಯಶ್‌ರ ಈ ಲುಕ್ ಬಗ್ಗೆ ಫ್ಯಾನ್ಸ್(Fans) ಹೆಚ್ಚಾಗಿ ತಲೆ ಕೆಡೆಸಿಕೊಂಡಿರಲಿಲ್ಲ. ಆದ್ರೆ ಪದೇ ಪದೇ ರಾಕಿ ಇದೇ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರೋದ್ರಿಂದ ಇದು ಯಶ್‌ರ ಟಾಕ್ಸಿಕ್ ಸಿನಿಮಾ ಲುಕ್ಕೇ ಇರಬೇಕು ಅಂತ ಚರ್ಚೆ ಶುರುವಾಗಿದೆ. ಈ ಚಿತ್ರಕ್ಕಾಗಿ ಯಶ್ ಮೇಕ್ ಓವರ್ ಮಾಡ್ಕೊಂಡಿದ್ದಾರೆ. ಈ ಹೊಸ ಲುಕ್‌ನಿಂದ ಯಶ್ ಮುಂದಿನ ಟಾಕ್ಸಿಕ್ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿರೋದಂದು ನಿಜ. ಒಟ್ಟಿನಲ್ಲಿ ಯಶ್ ಯಾವ್ ಲುಕ್ನಲ್ಲಿ ಬಂದ್ರು ಸಿಕ್ಕಾಪಟ್ಟೆ ಹ್ಯಾಂಡ್ಸಮ್ ಆಗಿ ಕಾಣಿಸುತ್ತಾ ಅಭಿಮಾನಿಗಳ ಹೃದಯ ಕದಿಯುತ್ತಲೇ ಇದ್ದಾರೆ.

ಇದನ್ನೂ ವೀಕ್ಷಿಸಿ:  Shivaratri special Payasa: ಶಿವರಾತ್ರಿಗೆ ‘ನಿಮ್ಮನೆ ಚಂದ್ರು’ ಸ್ಪೆಷಲ್ ಅಡುಗೆ! ಇದು ಬೆಳ್ಳುಳ್ಳಿ ಕಬಾಬ್ ಅಲ್ಲ.. ಸಖತ್‌ ಪಾಯಸ!

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more