ಕಾಂತಾರ ಸಿನಿಮಾ ಯಶಸ್ವಿ 50 ದಿನ ಪೂರೈಸಿದ್ದು, ಇನ್ನೂ ಬೆಳ್ಳಿತೆರೆಯ ಮೇಲೆ ಕಾಂತಾರದ ಪಂಜುರ್ಲಿ, ಗುಳಿಗ ದೈವಗಳ ನರ್ತನ ನಿಂತಿಲ್ಲ.
50 ದಿನದ ಸಂಭ್ರಮಾಚರಣೆಯಲ್ಲಿರುವ ಕಾಂತಾರ ಸಿನಿಮಾ, ಭಾರತೀಯ ಚಿತ್ರರಂಗದಲ್ಲಿ ಹೇಗೆಲ್ಲಾ ಸಕ್ಸಸ್ ಆಗಿದೆ ಅನ್ನೋ ಹಲವು ರೆಕಾರ್ಡ್ಸ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹಿಂದಿಯಲ್ಲಿ 80 ಕೋಟಿ. ತೆಲುಗು, ತಮಿಳು, ಮಲೆಯಾಳಂನಿಂದ 90 ಕೋಟಿ. ಕರ್ನಾಟಕ ಒಂದರಲ್ಲೇ 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರೋ ಕಾಂತಾರ, ಹೊರ ದೇಶಗಳಲ್ಲಿ ಒಟ್ಟು 60 ಕೋಟಿ ಗಳಿಸಿದೆ ಅಂತ ಅಂದಾಜಿಸಲಾಗಿದೆ. ಈ ಎಲ್ಲಾ ಕಲೆಕ್ಷನ್ ಸೇರಿ ಕಾಂತಾರದ ಇದುವರೆಗಿನ ಗಳಿಕೆ375 ಕೋಟಿಗೂ ಹೆಚ್ಚು. ಇದಲ್ಲದೇ ನಮ್ಮ ಕರಾವಳಿಯ ಪಂಜುರ್ಲಿ, ಗುಳಿಗ ದೈವಗಳು ಹೊರದೇಶದಲ್ಲೂ ರೆಕಾರ್ಡ್ ಮಾಡಿವೆ. ದಕ್ಷಿಣ ಭಾರತದ ಅಷ್ಟೂ ಭಾಷೆಯಲ್ಲೂ ಕನ್ನಡದ ಕಾಂತಾರ ತೆರೆ ಕಂಡಿದೆ. ಅದೇ ರೀತಿ ಅಮೆರಿಕಾದಲ್ಲೂ ಕಾಂತಾರ ರಿಲೀಸ್ ಆಗಿದೆ. ನಾಲ್ಕು ಭಾಷೆಯಲ್ಲೂ ಅಮೇರಿಕಾದಲ್ಲಿ ರಿಲೀಸ್ ಆದ ಮೊದಲ ಕನ್ನಡ ಚಿತ್ರ ಕಾಂತಾರ ಆಗಿದ್ದು, ಅಲ್ಲಿಯೂ 50 ದಿನ ಪೂರೈಸಲಿದೆ. ಅಷ್ಟೆ ಅಲ್ಲ ಕನ್ನಡದ ಕಾಂತಾರ ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್'ನಲ್ಲೂ ರಿಲೀಸ್ ಆಗಿದ್ದು, ಆಸ್ಟ್ರೇಲಿಯಾದಲ್ಲಿ 50 ದಿನ ಪೂರೈಸಿದ ಮೊದಲ ಕನ್ನಡದ ಸಿನಿಮಾ ಎಂಬ ಹೆಗ್ಗಳಿಕೆ ಕಾಂತಾರಕ್ಕೆ ಸಿಗುತ್ತಿದೆ.
Prajwal Devaraj Abbara Film Review: ವಿಭಿನ್ನ ತಿರುವುಗಳ ಕುತೂಹಲಕರ ಅಬ್ಬರ