ಲೀಲಾವತಿ ಮನೆಯಲ್ಲಿ ಹಿರಿಯ ಕಲಾವಿದರು: 'ಪುಷ್ಪ 2' ಕಲಾವಿದರಿದ್ದ ಬಸ್ ಅಪಘಾತ !

Jun 2, 2023, 10:28 AM IST

ಮಹಿಳಾ ದಿನದ ಅಂಗವಾಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಿರಿಯ ನಟಿ ಲೀಲಾವತಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಈ ಹಿಂದೆಯೇ ಆಯೋಜಿಸಿತ್ತು. ಆದರೆ ವಯೋಸಹಜ ಕಾಯಿಲೆಯಿಂದ ಲೀಲಾವತಿ ಅವರು ಹಾಸಿಗೆ ಹಿಡಿದಿದ್ರು. ಈಗ ಚೇತರಿಸಿಕೊಂಡಿದ್ದಾರೆ. ಹೀಗಾಗಿ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ನಟಿ ಲೀಲಾವತಿ ಅವರ ಮನೆಯಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ಹಿರಿಯ ಕಲಾವಿದರ ಸೇರಿಕೊಂಡು ಸನ್ಮಾನ ಮಾಡಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಸಿನಿಮಾದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಆಂಧ್ರ ಪ್ರದೇಶದಲ್ಲಿ ಇಡೀ ತಂಡ ಚಿತ್ರೀಕರಣಕ್ಕಾಗಿ ಬೀಡುಟ್ಟಿದೆ. ಶೂಟಿಂಗ್ ಮುಗಿದ ಬಳಿಕ ಕಲಾವಿದರನ್ನು ಕರೆದುಕೊಂಡು ಹೈದರಾಬಾದ್‌ಗೆ ಬಸ್ ಮರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ.

ಇದನ್ನೂ ವೀಕ್ಷಿಸಿ: ಅತ್ಯಾಧುನಿಕ ತಂತ್ರಜ್ಞಾನದ ಸಿನಿಮಾ ಉಪ್ಪಿ 'UI':ಈ ಚಿತ್ರ ಟೆಕ್ನಿಕಲಿ ಎಷ್ಟು ಸ್ಟ್ರಾಂಗ್ ಇದೆ ಗೊತ್ತಾ?