Kaatera: 300 ಶೋ ಟಿಕೆಟ್ ಸೋಲ್ಡ್ ಔಟ್..! ಕಾಟೇರ ರೊಮ್ಯಾಂಟಿಕ್ ಸಾಂಗ್ ಬಿಡುಗಡೆ..!

Dec 29, 2023, 9:51 AM IST


ಕಾಟೇರ ಸಿನಿಮಾದ ಬೇಡಿಕೆ ಹೇಗಿದೆ ಅಂತ ಚಿತ್ರತಂಡವೇ ಅಫೀಷಿಯಲ್ ಆಗಿ ಹೇಳಿದೆ. ಕಾಟೇರ ಟಿಕೆಟ್ ಬುಕ್ಕಿಂಗ್(Ticket Booking) ಓಪನ್ ಆಗಿದ್ದು ನಾಲ್ಕು ದಿನದ ಹಿಂದೆ. ಈ ನಾಲ್ಕೇ ದಿನದಲ್ಲಿ 1 ಲಕ್ಷ ಟಿಕೆಟ್ ಬಿಕರಿ ಆಗಿವೆ. ಇದರಿಂದ ಸಿನಿಮಾ ರಿಲೀಸ್‌ಗೂ ಮೊದಲೇ 2 ಕೋಟಿ ಥಿಯೇಟರ್ ಕಲೆಕ್ಷನ್ ಮಾಡಿದೆ. ಈ ವರ್ಷ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿರೋ ಕನ್ನಡದ ಕಡೇ ಸಿನಿಮಾ ಕಾಟೇರ(Kaatera). ಈ ಸಿನಿಮಾಗೆ ಸಿಗ್ತಿರೋ ಕ್ರೇಜ್ ನೋಡಿದ್ರೆ ಕಾಟೇರ ಹಿಟ್ ಆಗೋ ಎಲ್ಲಾ ಸಾಧ್ಯತೆ ಇದೆ. ಫಸ್ಟ್ ಡೇನೇ 300 ಶೋಗಳು ಹೌಸ್ ಫುಲ್ ಆಗಿರೋ ಖುಷಿಯಲ್ಲಿ ಕಾಟೇರನ ಮತ್ತೊಂದು ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ. ಕಾಟೇರ, ಇದು ಟ್ಯಾಲೆಂಟೆಡ್ ಡೈರೆಕ್ಟರ್ ತರುಣ್ ಸುಧೀರ್(Tharun Sudhir) ನಿರ್ದೇಶನದ ಸಿನಿಮಾ. ಕನ್ನಡದಲ್ಲಿ ಕ್ವಾಲಿಟಿ ಸಿನಿಮಾಗಳನ್ನ ಗೆಲ್ಲೋ ಸಿನಿಮಾಗಳನ್ನ ಕೊಟ್ಟಿರೋ ರಾಕ್ಲೈನ್ ಪ್ರೊಡಕ್ಷನ್ನ ಕಾಣಿಕೆ ಕಾಟೇರ. ಅಷ್ಟೆ ಅಲ್ಲ ಮಾಲಾಶ್ರೀ ಮಗಳು ಆರಾಧನಾ ಡೆಬ್ಯೂ ಆಗ್ತಿರೋ ಮೊದಲ ಸಿನಿಮಾ ಇದು. ಕ್ವಾಲಿಟಿ ಮೇಕಿಂಗ್ ಹಿಟ್ ಹಾಡುಗಳು ಕಾಟೇರನ ಹೈಲೆಟ್. ಇದರ ಜೊತೆ ಕಾಟೇರ ಸ್ಟೋರಿ ಇಂಟ್ರೆಸ್ಟಿಂಗ್ ಆಗಿದೆ. ಕಾಟೇರ ಸಿನಿಮಾದ ಹೈಲೆಟ್ ಅಂದ್ರೆ ಸ್ಟೋರಿ. 70 ದಶಕದಲ್ಲಿ ನಡೆದ ರಿಯಲ್ ಸ್ಟೋರಿಯ ಇನ್ಸ್ಪರೇಷನ್ನಿಂದ ಕಾಟೇರನ ಕತೆ ಹುಟ್ಟಿದ್ದು. ಸ್ಯಾಂಡಲ್ವುಡ್ನಲ್ಲಿ(Sandalwood) ಸಧ್ಯ ಟ್ರೆಂಡಿಂಗ್ನಲ್ಲಿರೋ ಸ್ಟೋರಿ ರೈಟರ್ ಕಮ್ ಡೈರೆಕ್ಟರ್ ಜಡೇಶ್ ಈ ಸಿನಿಮಾಗೆ ಕಥೆ ಬರೆದಿದ್ದಾರೆ. ರೈತರ ಸುತ್ತ ಕಾಟೇರನ ಕತೆ ಸಾಗುತ್ತೆ. 

ಇದನ್ನೂ ವೀಕ್ಷಿಸಿ:  Ram Mandir: ರಾಮ ಅಯೋಧ್ಯೆಗೆ ಬಂದಾಗ ಆದಂತಹ ಸಂತೋಷ ಈಗ ಆಗುತ್ತಿದೆ: ಗೋಪಾಲ್‌ ನಾಗರಕಟ್ಟೆ