Jul 17, 2023, 1:22 PM IST
ರಾಕಿಭಾಯ್ ಯಶ್ ನಟನೆಯ ಕೆಜಿಎಫ್ 1 ಕೆಜಿಎಫ್2 ಎರಡೂ ಚಿತ್ರಗಳು ಜಪಾನ್‌ನಲ್ಲಿ(Japan) ಇತ್ತೀಚೆಗಷ್ಟೇ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿವೆ. ಆದ್ರೆ ರಿಲೀಸ್ ಮುನ್ನಾ ಯಶ್(Yash) ಗೋಲ್ಡ್ ಶಾಪ್ (Goldshop) ಒಂದರ ಉದ್ಘಾಟನೆಗೆಂದು ಮಲೇಷಿಯಾಗೆ ಹೋಗಿದ್ದರು. ಯಶ್ ಗೆ ಎಂಥಾ ಸ್ವಾಗತ ಎಂಥಾ ಆತಿಥ್ಯ ನೀಡಿದ್ದಾರೆಂದರೆ ನೀವು ಬೆಚ್ಚಿ ಬೀಳ್ತೀರಿ. ಯಶ್ ಅಭಿಮಾನಿಗಳಂತೂ ಈ ವೀಡಿಯೋ ನೋಡಿ ಥ್ರಿಲ್ಲಾಗಿ. ಇದು ಇದು ಚೆನ್ನಾಗಿರೋದು ಅಂದ್ರೆ ಎನ್ನುತ್ತಿದ್ದಾರೆ. ಯಶ್ ಹೆಸರಲ್ಲಿ ಚಿನ್ನದ ಬಿಸ್ಟೆಟ್ನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆಮಾಡಿದ್ದರು. ಜೊತೆಗೆ ಯಶ್ ಜಪಾನಿ ಭಾಷೆಯಲ್ಲೆ ಮಾತಾಡಿ ಕಿಕ್ ನೀಡಿದ್ದರು. ಅಲ್ಲಿನ ಕಾರ್ಯಕ್ರಮದಲ್ಲಿ ಯಶ್ ತಮಿಳಿನಲ್ಲಿ ಕೆಜಿಎಫ್ ಡೈಲಾಗ್ ಹೊಡೆದಿದ್ದು ಫುಲ್ ವೈರಲ್ ಆಗಿತ್ತು. ಇದೀಗ ಯಶ್ ಮಲೇಷಿಯ ಪಯಣದ ಗ್ಲಿಂಪ್ಸ್ ವೀಡಿಯೋ ರಿಲೀಸ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಇದನ್ನೂ ವೀಕ್ಷಿಸಿ: ಮೋದಿಯನ್ನ ಮಣಿಸೋಕೆ ವಿಪಕ್ಷಗಳ ಗೇಮ್ ಪ್ಲಾನ್: ಜೆಡಿಎಸ್ ನಡೆ ಯಾರ ಕಡೆ..?