May 28, 2023, 11:14 AM IST
ಬ್ಲಾಕ್ ಮ್ಯಾಜಿಕ್, ಮಾಟ ಮಂತ್ರದ ಸುತ್ತ ಸಾಗುವ ಕಥಾಹಂದರ ಇರುವ "ಗದಾಯುದ್ದ" ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜೂನ್ 9 ರಂದು ರಾಜ್ಯಾದ್ಯಂತ ಈ ಸಿನಿಮಾ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶ್ರೀವತ್ಸ ರಾವ್ ಅವರ ನಿರ್ದೇಶನದ ಈ ಸಿನಿಮಾವನ್ನು ನಿತಿನ್ ಶಿರಗೂರ್ ಕರ್ ನಿರ್ಮಾಣ ಮಾಡಿದ್ದು ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ವಾಮಾಚಾರ ನಡೆಯುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಿ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮನರಂಜನೆಯ ಜೊತೆಗೆ ಮಾಹಿತಿ ನೀಡುವ ಪ್ರಯತ್ನವೂ ಈ ಸಿನಿಮಾದಲ್ಲಿದೆ. ಚಿತ್ರದಲ್ಲಿ ಶರತ್ ಲೋಹಿತಾಶ್ವ, ಅಯ್ಯಪ್ಪ ಶರ್ಮಾ, ಸಾಧುಕೋಕಿಲ, ಶರತ್ ಲೋಹಿತಾಶ್ವ, ಸ್ಪರ್ಶ ರೇಖ ಸೇರಿದಂತೆ ದೊಡ್ಡ ತಾರಾಗಣ ಕೂಡ ಇದೆ.
ಇದನ್ನೂ ವೀಕ್ಷಿಸಿ: ಮತ್ತೆ ಹುಟ್ಟಿಕೊಳ್ತು ಯಶ್-ನರ್ತನ್ ಕನಸಿನ ಗೋಪುರ: ರಾಕಿ ಜೊತೆ ಮಫ್ತಿ ಡೈರೆಕ್ಟರ್ ಸಿನಿಮಾ, ಇದು ನಿಜಾನ ?