ತೋಳು ತಟ್ಟಿ ನಾನಾ ನೀನಾ ಎಂದ ತ್ರಿಬಲ್ ಸ್ಟಾರ್ಸ್ ! ಅಭಿಷೇಕ್, ಕೃಷ್ಣ, ರಾಜ್ ಬಿ ಶೆಟ್ಟಿ ಮಧ್ಯೆ ಮೆಗಾ ಫೈಟ್!

Nov 22, 2023, 11:46 AM IST

ಸ್ಯಾಂಡಲ್‌ವುಡ್‌ನ ಭರವಸೆಯ ಸ್ಟಾರ್ಸ್ ರಾಜ್ ಬಿ ಶೆಟ್ಟಿ(Raj B Shetty), ಅಭಿಷೇಕ್ ಅಂಬರೀಶ್(Abhishek Ambareesh), ಹಾಗು ಡಾರ್ಲಿಂಗ್ ಕೃಷ್ಣ(Darling Krishna).ಇವರ ಸಿನಿಮಾಗಳಿಗೆ ಮಾರ್ಕೆಟ್‌ನಲ್ಲಿ ಭಾರಿ ಭೇಡಿಕೆ ಇದೆ. ಆದ್ರೆ ಅದ್ಯಾಕೋ ಗೊತ್ತಿಲ್ಲ . ಈ ತ್ರವಳಿ ಸ್ಟಾರ್ಸ್ ಮಧ್ಯೆ ಈಗ ಮೆಗಾ ಫೈಟ್ ಒಂದು ಏರ್ಪಟ್ಟಿದೆ. ಈ ಮೂರೂ ಜನ ಹೀರೋಗಳು ತೋಳು ತಟ್ಟಿ ನಾನಾ ನೀನಾ ಅಂತ ವಾರ್ಗೆ ಇಳಿದಿದ್ದಾರೆ. ರಾಜ್ ಬಿ ಶೆಟ್ಟಿ, ಡಾರ್ಲಿಂಗ್ ಕೃಷ್ಣ ಅಭಿಶೇಕ್ ಅಂಬರೀಶ್ ಮಧ್ಯೆ ಯಾವ್ದೇ ಮುನಿಸಿಲ್ಲ. ಈ ಮೂರು ಜನ ಸ್ಟಾರ್ಸ್ ಗೆ ಅವರವರ ವ್ಯಾಪ್ತಿಯಲ್ಲಿ ಒಳ್ಳೆ ಮಾರ್ಕೆಟ್ ಸೃಷ್ಟಿಸಿಕೊಂಡಿದ್ದಾರೆ. ಇವರ ಸಿನಿಮಾಗಳನ್ನ ಇಷ್ಟ ಪಡೋ ಅವರದ್ದೇ ಆದ ಪ್ರೇಕ್ಷಕ ವೃಂಧ ಇದೆ. ಹೀಗಿದ್ರೂ ಈಗ ಮೂರು ಜನ ಹೀರೋಗಳ ಮಧ್ಯೆ ಗದ್ದಲ ಎದ್ದಿರೋದು ಯಾಕೆ.? ಅದಕ್ಕೆ ಕಾರಣ ಅಭಿ ನಟನೆಯ ಬ್ಯಾಡ್ ಮ್ಯಾನೆರ್ಸ್, ಕೃಷ್ಣ ನಟನೆಯ ಶುಗರ್ ಫ್ಯಾಕ್ಟರಿ, ರಾಜ್ ಬಿ ಶೆಟ್ಟಿ ನಟಿಸಿ ನಿರ್ದೇಶಿಸಿರೋ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಗಳು. ರಾಜ್ ಬಿ ಸೆಟ್ಟಿ ಡಾರ್ಲಿಂಗ್ ಕೃಷ್ಣ ಹಾಗು ಅಭಿಷೇಕ್ ಅಂಬರೀಶ್ ಈಗ ಸ್ಯಾಂಡಲ್ವುಡ್ ಬಾಕ್ಸಾಫೀಸ್ನಲ್ಲಿ ಕಾದಾಟಕ್ಕೆ ಇಳಿದಿದ್ದಾರೆ. ಅಭಿ ನಟನೆಯ ಬ್ಯಾಡ್ ಮ್ಯಾನರ್ಸ್ ಸಿನಿಮಾ ರಾಜ್ ಬಿ ಶೆಟ್ಟಿಯ ಡ್ರೀಮ್ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ. ಹಾಗು ಡಾರ್ಲಿಂಗ್ ಕೃಷ್ಣ ನಟನೆಯ ಫ್ರೆಶ್ ಲವ್ ಸ್ಟೋರಿ ಕಮ್ ಕಾಮಿಡಿ ಸಿನಿಮಾ ಶುಗರ್ ಫ್ಯಾಕ್ಟರಿ ಇದೇ ನವೆಂಬರ್ 24ಕ್ಕೆ ಒಂದೇ ದಿನ ತೆರೆ ಕಾಣುತ್ತಿವೆ. ಈ ಮೂರು ಸಿನಿಮಾದಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲೋದ್ಯಾರು.? ಯಾರ ಜೋಳಿಗೆ ಬೇಗ ತುಂಬುತ್ತೆ ಅನ್ನೋ ಲೆಕ್ಕಾಚಾರ ಗಾಂಧೀನಗರದಲ್ಲಿ ನಡೆಯುತ್ತಿದೆ.

ಇದನ್ನೂ ವೀಕ್ಷಿಸಿ:  ಡಿಸೆಂಬರ್ ಲಕ್ ಹಿಂದೆ ಬಿದ್ದ ಸ್ಯಾಂಡಲ್‌ವುಡ್‌ ಲಕ್ಕಿ!'YASH-19' ಅನೌನ್ಸ್, ಶೂಟಿಂಗ್‌ಗೆ ಮಹಾ ಪ್ಲ್ಯಾನ್!