ನವೀಶ್ ಶಂಕರ್ 'ಕ್ಷೇತ್ರಪತಿ'ಗೆ ಅನ್ನದಾತರ ಬೆಂಬಲ..! ಸಿನಿಮಾ ನೋಡಲು ಎತ್ತಿನ ಬಂಡಿ ಏರಿ ಬಂದ ರೈತ..!

ನವೀಶ್ ಶಂಕರ್ 'ಕ್ಷೇತ್ರಪತಿ'ಗೆ ಅನ್ನದಾತರ ಬೆಂಬಲ..! ಸಿನಿಮಾ ನೋಡಲು ಎತ್ತಿನ ಬಂಡಿ ಏರಿ ಬಂದ ರೈತ..!

Published : Sep 02, 2023, 09:46 AM IST

ಅನ್ನದಾತರ ಮನ ಗೆಲ್ಲುತ್ತಿದೆ ರೈತ ಹೋರಾಟದ ಕ್ಷೇತ್ರಪತಿ!
ಕ್ಷೇತ್ರಪತಿ ಕೈ ಹಿಡಿದ ಕಲಬುರಗಿ ತಾಲೂಕಿನ ರೈತ ಬಳಗ!
ಉತ್ತರ ಕರ್ನಾಟಕ ರೈತರ ಮನ ಗೆದ್ದ ಕ್ಷೇತ್ರಪತಿ ಸಿನಿಮಾ!

ರೈತ ಈ ದೇಶದ ಬೆನ್ನೆಲುಬು. ರೈತ ಮನಸ್ಸು ಮಾಡಿದ್ರೆ ದೇಶವನ್ನ ಕಟ್ಟಲೂಬಹುದು. ಅನ್ಯಾಯದ ವಿರುದ್ಧ ದಂಗೆಯನ್ನೂ ಏಳಬಹುದು. ಆದ್ರೆ ಒಬ್ಬ ರೈತ ಮನಸ್ಸು ಮಾಡಿದ್ರೆ ಸಿನಿಮಾವನ್ನೂ ಗೆಲ್ಲಿಸಬಹುದು ಅಂತ ಎಂದಾದ್ರು ಕೇಳಿದ್ರಾ..? ಅದು ಈಗ ಸ್ಯಾಂಡಲ್‌ವುಡ್‌ನಲ್ಲಿ(Sandalwood) ಆಗ್ತಿದೆ. ಅಪ್ಪಟ ರೈತರ ಕಥೆಯ ಸಿನಿಮಾ ಕ್ಷೇತ್ರಪತಿಗೆ(Kshetrapati) ಜನ ಬೆಂಬಲ ಸಿಕ್ಕಿರೋದ್ದಷ್ಟೇ ಅಲ್ಲ ಈಗ ರೈತರ ಬೆಂಬಲವೂ ಸಿಕ್ಕಿದೆ. ನವೀನ್ ಶಂಕರ್ ನಟನೆಯ ಕ್ಷೇತ್ರಪತಿ ಸಿನಿಮಾ ಬಿಡುಗಡೆ ಆಗಿ 15 ದಿನ ಆಗಿದೆ. ಇದೀಗ ಈ ಸಿನಿಮಾ ನೋಡಲು ರೈತರ ದಂಡು ಚಿತ್ರಮಂದಿರಕ್ಕೆ ನುಗ್ಗುತ್ತಿದೆ. ಕಲಬುರಗಿ(Kalaburagi) ತಾಲೂಕಿನ ಪಟ್ಟಣ ಗ್ರಾಮದಿಂದ ಆರ್ಚಿಡ್ ಮಾಲ್ ನ ಮಲ್ಟಿಫ್ಲೆಕ್ಸ್ ಗೆ ಕ್ಷೇತ್ರಪತಿ ನೋಡಲು ಎತ್ತಿನ ಬಂಡಿ ಏರಿ ಬಂದಿದ್ದಾರೆ ರೈತರು. ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲಿ ಕಾರು ಬೈಕ್ ಪಾರ್ಕಿಂಗ್ ಮಾಡೋದನ್ನ ನೋಡಿದ್ದೇವೆ. ಆದ್ರೆ ಕ್ಷೇತ್ರಪತಿ ಇರೋ ಚಿತ್ರಮಂದಿರದಲ್ಲಿ ಎತ್ತಿನ ಬಂಡಿ ಪಾರ್ಕಿಂಗ್ ಮಾಡಿದ್ದನ್ನ ನೋಡಿ ಸಿನಿಮಾ ನೋಡಲು ಬಂದ ಪ್ರೇಕ್ಷಕರು ತ್ರಿಲ್ ಆಗಿದ್ರು. ರೈತರ ಹೋರಾಟದ ಕತೆಯ ಕ್ರೇತ್ರಪತಿ ಸಿನಿಮಾವನ್ನ ಶ್ರೀಕಾಂತ್ ಕಟಗಿ ನಿರ್ದೇಶನ ಮಾಡಿದ್ದು, ನವೀನ್ ಶಂಕರ್ ಅರ್ಚನಾ ಜೋಯಿಸ್ ಜೋಡಿ ಸಿನಿಮಾದಲ್ಲಿ ಮೋಡಿ ಮಾಡುತ್ತಿದೆ.  

ಇದನ್ನೂ ವೀಕ್ಷಿಸಿ:  ಸುದೀಪ್ ಬರ್ತಡೇ ಫೆಸ್ಟಿವೆಲ್‌ಗೆ ಭಾರಿ ತಯಾರಿ: ನಂದಿ ಲಿಂಕ್ಸ್‌ ಗ್ರೌಂಡ್‌ನಲ್ಲಿ ಫ್ಯಾನ್ಸ್ ಭೇಟಿ !

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more