ಕನ್ನಡಪರ ಹೋರಾಟಕ್ಕಿಳಿದಿದ್ದ ಡಾ.ರಾಜ್‍ಕುಮಾರ್..! ಗೋಕಾಕ್ ಚಳವಳಿಯ ಇತಿಹಾಸವೇ ರೋಚಕ..!

Sep 25, 2023, 11:12 AM IST

ಗೋಕಾಕ್‌ ಚಳುವಳಿಯಲ್ಲಿ ಭಾಗವಹಿಸುವ ಮೂಲಕ ನಟ ಡಾ. ರಾಜ್‌ಕುಮಾರ್‌ (DR. Rajkumar) ನಟರು ಕನ್ನಡ ನಾಡು, ನುಡಿ, ಜಲಕ್ಕೋಸ್ಕರ ಹೋರಾಡಬೇಕು ಎಂದು ಹೇಳಿಕೊಟ್ಟಿದ್ದರು. ಬಳಿಕ ಸ್ಯಾಂಡಲ್‌ವುಡ್‌(Sandalwood) ಸ್ಟಾರ್ಸ್‌ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ರು. ರಾಜ್‌ಕುಮಾರ್‌ ಕವಿರತ್ನ ಕಾಳಿದಾಸ ಸಿನಿಮಾ ಶೂಟಿಂಗ್ ವೇಳೆ ಗೋಕಾಕ್‌ ಪ್ರತಿಭಟನೆಯಲ್ಲಿ(Gokak protest) ಭಾಗಿಯಾಗಿದ್ರು. ಇದೇ ವೇಳೆ ಕನ್ನಡಕ್ಕಾಗಿ ಹೋರಾಡಿ ಎಂದು ರಾಜ್‌ಕುಮಾರ್‌ ಕರೆ ಕೊಟ್ಟಿದ್ದರು. ಈ ಹೋರಾಟದಲ್ಲಿ ನಟ ಶಂಕರ್‌ನಾಗ್‌ ಸಹ ಭಾಗಿಯಾಗಿದ್ರು. ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕು ಎಂಬುದು ಈ ಚಳುವಳಿಯ ಉದ್ದೇಶವಾಗಿತ್ತು. 1980ರ ದಶಕದಲ್ಲಿ ನಡೆದ ಗೋಕಾಕ್ ಚಳವಳಿ ತ್ರಿಭಾಷಾ ಸೂತ್ರದಡಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯನ್ನಾಗಿ ಪರಿಗಣಿಸಬೇಕು ಎನ್ನುವ ಉದ್ದೇಶದೊಂದಿಗೆ ನಡೆಯಿತು.

ಇದನ್ನೂ ವೀಕ್ಷಿಸಿ:  ಕಾಳಿ ಹುಲಿ ಸಂರಕ್ಷಿತ ಪ್ರದೇಶ: ಕಾಡಂಚಿನ ಜನರಲ್ಲಿ ಜಾಗೃತಿ ಮೂಡಿಸಿದ ನಟ ರಿಷಬ್‌ ಶೆಟ್ಟಿ