Dec 17, 2023, 10:05 AM IST
'ಬಡವ ರಾಸ್ಕಲ್' ಸಿನಿಮಾ ಬಳಿಕ 'ಅಣ್ಣ From Mexico' ಸಿನಿಮಾದಿಂದ ಡಾಲಿ ಮತ್ತು ಶಂಕರ್ ಗುರು(Shankar Guru) ಕಾಂಬಿನೇಷನ್ನಲ್ಲಿ ಎರಡನೇ ಸಿನಿಮಾ ಬರುತ್ತಿದೆ. ಪಕ್ಕ ಆಕ್ಷನ್ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿದ್ದು, ದಿ ರಾಯಲ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸುತ್ತಿದ್ದು. ಐರಾ ಫಿಲ್ಮ್ಸ್ ಕೂಡ ಸಿನಿಮಾಗೆ ಕೈ ಜೋಡಿಸಿದೆ. 'ಅಣ್ಣ From Mexico' ಗೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ನಟ ಧನಂಜಯ್(Dolly dhananjay) ಅವರ ಹುಟ್ಟುಹಬ್ಬದಂದು 'ಅಣ್ಣ From Mexico' ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿತ್ತು. ಈಗ ಯಾವುದೇ ಸದ್ದು ಗದ್ದಲವಿಲ್ಲದೆ 'ಅಣ್ಣ From Mexico' ತಂಡ ಸಿನಿಮಾದ ಮುಹೂರ್ತ ಮಾಡಿ ಮುಗಿಸಿದೆ. ಜೊತೆಗೆ ಚಿತ್ರೀಕರಣಕ್ಕೂ ತಯಾರಿ ಮಾಡಿಕೊಂಡಿದೆ. ಬಂಡೆ ಮಹಾಕಾಳಿ ಆಶೀರ್ವಾದದಿಂದಿಗೆ 'ಅಣ್ಣ From Mexico' ಸಿನಿಮಾಗೆ 'ಬಡವ ರಾಸ್ಕಲ್' ಸಿನಿಮಾ ಬಳಗ ಮತ್ತೆ ಒಂದಾಗಿದೆ. ನಟ ರಾಕ್ಷಸ ಡಾಲಿ ಧನಂಜಯ್ ತಮ್ಮ ಹುಟ್ಟುಹಬ್ಬದಂದ 'ಅಣ್ಣ From Mexico' ಸಿನಿಮಾದ ಪೋಸ್ಟರ್(Poster) ಹಂಚಿಕೊಂಡಿದ್ದರು. ಈ ಚಿತ್ರತಂಡ ಸದ್ದಿಲ್ಲದೇ ಮುಹೂರ್ತ ಮುಗಿಸಿ ಶೂಟಿಂಗ್ ಅಖಾಡಕ್ಕೆ ಹೆಜ್ಜೆ ಇಡಲು ತಯಾರಾಗಿದೆ.ಡಾಲಿ ಸದ್ಯ ಉತ್ತರಕಾಂಡ, ಪುಷ್ಪ-2, ಝೀಬ್ರಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಮೆಕ್ಸಿಕೋದಲ್ಲೂ ಶೂಟಿಂಗ್ ನಡೆಯಲಿದೆ.
ಇದನ್ನೂ ವೀಕ್ಷಿಸಿ: ವಿಶ್ವ ಸುಂದರಿ ಮನೆಯಲ್ಲೂ ಇದೆ ಅತ್ತೆ-ಸೊಸೆ ಜಗಳ..! ಅತ್ತೆ ಮೇಲಿನ ಕೋಪಕ್ಕೆ ಗಂಡನ್ನೇ ದೂರ ಮಾಡ್ತಾರಾ ಐಶ್ವರ್ಯ..?