May 28, 2023, 10:59 AM IST
ಕಳೆದ ಎರಡು ವರ್ಷದಿಂದ ಸ್ಯಾಂಡಲ್‌ವುಡ್‌ನ ದೊಡ್ಡ ಗೋಪುರದಂತೆ ಬೆಳೆದುಕೊಂಡಿದ್ದು ಒಂದೇ ಒಂದು ವಿಷಯ. ಅದು ಕೆಜಿಎಫ್ ಕಿಂಗ್ ರಾಕಿಂಗ್ ಸ್ಟಾರ್ ಯಶ್ ಹಾಗೂ ಮಫ್ತಿ ಮಹರಾಜ ನಿರ್ದೇಶಕ ನರ್ತನ್ ಜೊತೆಗೂಡಿ ಸಿನಿಮಾ ಮಾಡ್ತಾರೆ ಅನ್ನೋದು. ಇದು ನಿಜ ನಿಜ ಅನ್ನುವಷ್ಟರಲ್ಲಿ ನಂಬಿಕೆ ಸುಳ್ಳಾಗಿತ್ತು. ಯಶ್ ನರ್ತನ್ ಜೊತೆ ಸಿನಿಮಾ ಮಾಡುತ್ತಿಲ್ಲ ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಆದ್ರೆ ಇವರಿಬ್ಬರು ಸಿನಿಮಾ ಮಾಡ್ತಾರಾ ಇಲ್ವಾ ಅನ್ನೋ ವಿಚಾರ ಬಗೆಹರಿಯದ ಕಥೆ ಆಗಿದೆ. ಯಾಕಂದ್ರೆ ಮಫ್ತಿ ಡೈರೆಕ್ಟರ್ ಕೊಟ್ಟಿರೋ ಆ ಹೇಳಿಕೆ. 'ಮಫ್ತಿ' ಸಿನಿಮಾ ಬಳಿಕ ನರ್ತನ್ ಕನ್ನಡದ ಸ್ಟಾರ್ ಡೈರೆಕ್ಟರ್ ಆಗಿ ಹೊರಹೊಮ್ಮಿದ್ರು. ಇತ್ತ 'ಕೆಜಿಎಫ್' ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಬಂದರೆ ಹೇಗಿರುತ್ತೆ? ಅನ್ನುವಾಗಲೇ ಈ ಜೋಡಿ ಒಂದಾಗಿತ್ತು. ಆದ್ರೆ ಯಶ್ ಒಪ್ಪುವಂತಹ ಸ್ಕ್ರಿಪ್ಟ್ ಇನ್ನೂ ಸಿದ್ಧವಾಗಿಲ್ಲ ಅನ್ನೋ ಕಾರಣಕ್ಕೆ ನರ್ತನ್ ಯಶ್ ಕಾಂಬಿನೇಷನ್ ಸಿನಿಮಾ ಆಸೆ ಮಡಚಿಟ್ಟ ಪೇಪರ್ ಆಗಿತ್ತು. ಆದ್ರೆ ಈಗ ನಿರ್ದೇಶಕ ನರ್ತನ್ ಕೊಟ್ಟ ಹೇಳಿಕೆ ಯಶ್ ನರ್ತನ್ ಸಿನಿಮಾ ಕನಸಿನ ಗೋಪುರ ಮತ್ತೆ ಎದ್ದು ನಿಲ್ಲುವಂತೆ ಮಾಡಿದೆ. ಮುಂದೊಂದು ದಿನ ರಾಕಿ ಜೊತೆ ಮಫ್ತಿ ಡೈರೆಕ್ಟರ್ ಸಿನಿಮಾ ಮಾಡೋದು ನಿಜಾ ಅನ್ನೋ ಟಾಕ್ ಶುರುವಾಗಿದೆ.
ಇದನ್ನೂ ವೀಕ್ಷಿಸಿ: ಕೊನೆಗೂ ಈಡೇರಿತು ಹ್ಯಾಟ್ರಿಕ್ ಹೀರೋ ಫ್ಯಾನ್ಸ್ ಕನಸು: ಬೆಳ್ಳಿತೆರೆ ರಣ ಕಣದಲ್ಲಿ ಭೈರತಿ ರಣಗಲ್ ಶಿವಣ್ಣನ ಕಿಚ್ಚು !