ಎರಡನೇ ವಾರವೂ ಭರ್ಜರಿ ಪ್ರದರ್ಶನದಲ್ಲಿ ಕೆರೆಬೇಟೆ !ಸಿನಿಮಾ ನೋಡಿ ಖುಷಿ ಪಟ್ಟ ಆ್ಯಕ್ಷನ್ ಪ್ರಿನ್ಸ್ ಧ್ರುವ..!

ಎರಡನೇ ವಾರವೂ ಭರ್ಜರಿ ಪ್ರದರ್ಶನದಲ್ಲಿ ಕೆರೆಬೇಟೆ !ಸಿನಿಮಾ ನೋಡಿ ಖುಷಿ ಪಟ್ಟ ಆ್ಯಕ್ಷನ್ ಪ್ರಿನ್ಸ್ ಧ್ರುವ..!

Published : Mar 22, 2024, 12:19 PM IST

ಕೆರೆಬೇಟೆ ಸದ್ಯ ಸ್ಯಾಂಡಲ್‌ವುಡ್‌ ಬೆಳ್ಳಿತೆರೆ ಮೇಲೆ ಟ್ರೆಂಡಿಂಗ್‌ನಲ್ಲಿರೋ ಸಿನಿಮಾ. ಕಳೆದ ವಾರ ಬಿಡುಗಡೆ ಅಗಿದ್ದ ಅಪ್ಪಟ ಮಲೆನಾಡ ಕತೆಯ ಕೆರೆಬೇಟೆ ಸಿನಿಮಾ ನೋಡಿದ ಮಂದಿಯಿಂದ ಬೆಸ್ಟ್ ರಿವ್ಯೂ ಸಿಕ್ಕಿದೆ. ಇದೇ ಕಾರಣಕ್ಕೆ ಕೆರೆಬೇಟೆ ರಿಲೀಸ್ ಆದ ಚಿತ್ರಮಂದಿರಗಳ ಸಂಖ್ಯೆಯೂ ಹೆಚ್ಚಾಗಿದೆ.
 

ಈ ಕೆರೆಬೇಟೆ ಸಿನಿಮಾ ಎರಡನೇ ವಾರವೂ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಕೆರೆಬೇಟೆ(Kerebete Movie) ಬಗ್ಗೆ ಜನ ಮಾತಾಡಿಕೊಂಡಿದ್ದನ್ನ ಕೇಳಿ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಕೂಡ ಥಿಯೇಟರ್ಗೆ ಬಂದು ಸಿನಿಮಾ ನೋಡಿದ್ದಾರೆ. 'ಮಾರ್ಟಿನ್' ಸಿನಿಮಾದ ನಿರ್ದೇಶಕ ಎ ಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಇಬ್ಬರೂ ಜೊತೆಯಾಗಿ ಸಿನಿಮಾವನ್ನು ನೋಡಿದ್ದಾರೆ. ಬಳಿಕ ಮಾಧ್ಯಮಗಳಿಗೆ 'ಕೆರೆಬೇಟೆ' ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಕೆರೆಬೇಟೆ ಅದ್ಭುತ ಕಂಟೆಂಟ್ ಸಿನಿಮಾ. ಸಿನಿಮಾದ ಕತೆ ಸ್ಕ್ರೀನ್ ಪ್ಲೇ ಹಾಡುಗಳು ನಟನೆ ಮಜವಾಗಿದೆ. ಈ ಸಿನಿಮಾವನ್ನ ಎಲ್ಲರೂ ಚಿತ್ರಮಂದಿರಲ್ಲೇ ನೋಡಿ ಎಂದಿದ್ದಾರೆ. ಕೆರೆಬೇಟೆ ಸಿನಿಮಾ ಧ್ರುವ ಮನಸ್ಸು ಮಾತ್ರ ಗೆದ್ದಿಲ್ಲ. ನಟ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ವಿಕ್ರಂ ರವಿಚಂದ್ರನ್, ನಿರ್ದೇಶಕ ಸಿಂಪಲ್ ಸುನಿ ಕೂಡ ಈ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.  ಗೌರಿಶಂಕರ್ ನಾಯಕನಾಗಿ ನಟಿಸಿರೋ 'ಕೆರೆಬೇಟೆ' ಸಿನಿಮಾ ಅಪ್ಪಟ ದೇಸಿ ಸಿನಿಮಾ. ಮಲೆನಾಡಿನ ಭಾಗದ ಸುಂದರ ತಾಣಗಳ ಜೊತೆ ಮನಕಲುಕುವ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ರಾಜ್‌ಗುರು ನಿರ್ದೇಶನದ ಕೆರೆಬೇಟೆಯಲ್ಲಿ ಗೌರಿಶಂಕರ್ಗೆ ನಾಯಕಿಯಾಗಿ ಬಿಂದು ನಟಿಸಿದ್ದಾರೆ. ಸಧ್ಯ ಪ್ರೇಕ್ಷಕರಿಂದ ಒಳ್ಳೆ ಪ್ರಶಂಸೆ ಪಡೆಯುತ್ತಿರೋ ಕೆರೆಬೇಟೆ ಸಿನಿಮಾವನ್ನ ಈಗ ಕನ್ನಡ ಚಿತ್ರರಂಗದ ತಾರೆಯರೂ ನೋಡಿ ಖುಷಿ ಪಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಮೂಲ ಬೇರು ಮರೆತಿಲ್ಲ ಅಣ್ಣಾವ್ರ ಮೊಮ್ಮಗ..!ಗಾಜನೂರಿನ ಅಣ್ಣಾವ್ರ ಮನೆಯಲ್ಲಿ ಯುವ ಸಂದರ್ಶನ..!

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more