Darshan: 'ಡೆವಿಲ್ ದಿ ಹೀರೋ'ಗೆ ಹೀರೋಯಿನ್ ಫಿಕ್ಸ್..! ದರ್ಶನ್ ಜೊತೆ ತೆರೆ ಹಂಚಿಕೊಳ್ಳೋದು ಯಾರು..?

Darshan: 'ಡೆವಿಲ್ ದಿ ಹೀರೋ'ಗೆ ಹೀರೋಯಿನ್ ಫಿಕ್ಸ್..! ದರ್ಶನ್ ಜೊತೆ ತೆರೆ ಹಂಚಿಕೊಳ್ಳೋದು ಯಾರು..?

Published : Feb 04, 2024, 10:27 AM ISTUpdated : Feb 04, 2024, 10:28 AM IST

ಕನ್ನಡದ ನಟ ದರ್ಶನ್ ಕಾಟೇರ ಗೆದ್ದ ಮೇಲೆ ಡೆವಿಲ್ ಆಗಿರೋದು ಅವ್ರ ಫ್ಯಾನ್ಸ್‌ಗೆ ಗೊತ್ತೇ ಇದೆ. ಆದ್ರೆ ದರ್ಶನ್‌ರ ಡೆವಿಲ್‌ನಲ್ಲಿ ನಟಿಸೋ ಹೀರೋಯಿನ್ ಯಾರು ಅನ್ನೋ ಹುಡುಕಾಟ ನಡೆಯುತ್ತಲೇ ಇತ್ತು. ಅದಕ್ಕೀಗ ಆನ್ಸರ್ ಸಿಕ್ಕಿದೆ. 'ಡೆವಿಲ್ ದಿ ಹೀರೋ'ಗೆ ಹೀರೋಯಿನ್ ಫಿಕ್ಸ್ ಆಗಿದ್ದಾರೆ. 

ಕಾಟೇರ ಸಿನಿಮಾ ಗೆದ್ದಿದ್ದೇ ತಡ. ದರ್ಶನ್‌ರ ಡೆವಿಲ್ ದಿ ಹೀರೋ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ. ಈ ಜವಾಬ್ಧಾರಿಯನ್ನ ನಿಭಾಯಿಸೋಕೆ ನಿರ್ದೇಶಕ ಮಿಲನಾ ಪ್ರಾಕಾಶ್ ಸಜ್ಜಾಗಿದ್ದು, ಬೆಂಗಳೂರಿನ(Bengaluru) ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ಕೂಡ ಶುರು ಮಾಡಿದ್ದಾರೆ. ಇದೀಗ ಡೆವಿಲ್‌ಗೆ(Devil the hero Movie) ನಾಯಕಿ ಹೆಸರು ರಿವೀಲ್ ಆಗಿದೆ. ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪ್ಲೇಯರ್ ಆಗಿರೋ ರಚನಾ ರೈ(Rachana Rai) ಅನ್ನೋ ಸುಂದರಿ ದರ್ಶನ್‌ರ(Darshan) ಡೆವಿಲ್‌ಗೆ ನಾಯಕಿ ಆಗಿದ್ದಾರೆ ಅನ್ನೋ ವಿಚಾರ ರಿವೀಲ್ ಆಗಿದೆ. 'ಸರ್ಕಸ್' ಅನ್ನೋ ಸಿನಿಮಾ ಮಾಡಿದ್ರು. ಸದ್ಯ ಧನ್ವೀರ್ ಗೌಡ ನಟನೆಯ 'ವಾಮನ' ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಕೋಸ್ಟಲ್‌ವುಡ್‌ನಿಂದ ಸ್ಯಾಂಡಲ್‌ವುಡ್‌ಗೆ(Sandalwood) ಬಂದಿದ್ದಾರೆ. ಇದೀಗ 'ಡೆವಿಲ್' ದರ್ಶನ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಹರಿದಾಡ್ತಿದೆ. ನಟ ದರ್ಶನ್ ಜೊತೆ ರಚನಾ ರೈ ಅಭಿನಯಿಸುತ್ತಾರೆ ಎನ್ನೋ ಸುದ್ದಿ ರಿವಿಲ್ ಆಗುತ್ತಿದ್ದಂತೆ ರಚನಾ ರೈ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ದರ್ಶನ್ ಅಭಿಮಾನಿಗಳು ಇನ್‌ಸ್ಟಾದಲ್ಲಿ ರಚನಾ ರೈರನ್ನ ಲೈಕ್ ಮಾಡುತ್ತಿದ್ದು ಫೋಟೊಗಳನ್ನ ವೈರಲ್ ಮಾಡುತ್ತಿದ್ದಾರೆ. ಸಧ್ಯ ಡೆವಿಲ್ ದಿ ಹೀರೋ ಸಿನಿಮಾದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಗಿದಿದೆ. ದರ್ಶನ್ ಹುಟ್ಟುಹಬ್ಬದ ದಿನ ಡೆವಿಲ್ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗುತ್ತಿದೆ.

ಇದನ್ನೂ ವೀಕ್ಷಿಸಿ:  ರಥಯಾತ್ರೆ ಸಾರಥಿಯ ಧರ್ಮಜಾಗೃತಿ ಹೋರಾಟ..! ರಾಮನಿಗಾಗಿ ಅಡ್ವಾಣಿ ಎದುರಿಸಿದ ವಿಚಾರಣೆಗಳೆಷ್ಟು..?

05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
Read more