Jan 27, 2024, 9:13 AM IST
ಇನ್ಮುಂದೆ ಚಿತ್ರರಂಗದ ಚಿಕ್ಕಣ್ಣನ ಹೊಸ ಎರಾ ಇರುತ್ತೆ. ಯಾಕಂದ್ರೆ ಚಿಕ್ಕಣ್ಣ(Chikkanna) ನಾಯಕನಾಗಿ ನಟಿಸಿರೋ ಉಪಾಧ್ಯಕ್ಷ ಸಿನಿಮಾ(Upadhyaksha Movie) ಸಿನಿ ಪ್ರೇಕ್ಷಕರಿಗೆ ಮಸ್ತ್ ಮನೊರಂಜನೆಯ ಹಬ್ಬದೂಟ ಹಾಕಿದೆ. ಈ ಸಿನಿಮಾ ನೋಡಿ ಸಿನಿ ಪ್ರೇಕ್ಷಕರು ಸಂಭ್ರಮಿಸುತ್ತಿದ್ದಾರೆ. ಅನೀಲ್ ಕುಮಾರ್ ನಿರ್ದೇಶನದ ಹಳ್ಳಿ ಸೊಗಡಿನ ಅಪ್ಪಟ ಕಾಮಿಡಿ ಸಿನಿಮಾ ಉಪಾಧ್ಯಕ್ಷ. ನಟ ಚಿಕ್ಕಣ್ಣನಗೆ ಮಲೈಕಾ(Malaika) ನಾಯಕಿಯಾಗಿ ನಟಿಸಿದ್ದಾರೆ. ಶರಣ್ ಗೆಸ್ಟ್ ರೋಲ್ ಮಾಡಿದ್ದಾರೆ. ಈ ಸಿನಿಮಾ ಶರಣ್ ಹಾಗು ಚಿಕ್ಕಣ್ಣ ನಟನೆಯ ಅಧ್ಯಕ್ಷ ಸಿನಿಮಾದ ಸೀಕ್ಚೆಲ್. ಹೀಗಾಗಿ ಉಪಾಧ್ಯಕ್ಷ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇತ್ತು. ಹಳ್ಳಿ ಕಟ್ಟೆಯಲ್ಲಿ ಉಪಾಧ್ಯಕ್ಷ ನ ಕಾಮಿಡಿ ಕಲಾಮ್ ನೋಡಿ ಸಿನಿ ಪ್ರೇಕ್ಷಕರು ಸಂಭ್ರಮಿಸುತ್ತಿದ್ದಾರೆ. ಸಾಧು ಕೋಕಿಲಾ, ಕರಿ ಸುಬ್ಬು, ಧರ್ಮಣ್ಣ ಕಡೂರ್, ವೀಣಾ ಸುಂದರ್, ತಬಲಾ ನಾಣಿಯಂತಹ ದೊಡ್ಡ ಕಲಾವಿಧರ ದಂಡೇ ಈ ಸಿನಿಮಾದಲ್ಲಿದೆ ಸ್ಮಿತಾ ಉಪಾಪತಿ ನಿರ್ಮಾಣ ಮಾಡಿರೋ ಈ ಸಿನಿಮಾ ಗೆಲ್ಲುವ ಎಲ್ಲಾ ಸಾಧ್ಯತೆಯೂ ಇದೆ.
ಇದನ್ನೂ ವೀಕ್ಷಿಸಿ: ವಿಜಯಲಕ್ಷ್ಮೀ ದರ್ಶನ್‌ಗೆ ಪವಿತ್ರಾ ಗೌಡ ವಾರ್ನಿಂಗ್! “ಲವ್, ಕೇರ್ ಜೊತೆ ದರ್ಶನ್ ಜೊತೆಗಿದ್ದೇನೆ” ಎಂದ ಪವಿತ್ರಾ..!