Upadhyaksha Movie: ಅಧ್ಯಕ್ಷನ ಅಖಾಡದಲ್ಲಿ ಉಪಾಧ್ಯಕ್ಷನ ಕಾಮಿಡಿ ಕಿಕ್! ನಾಯಕನಾಗಿಯೂ ಗೆದ್ದ ಚಿಕ್ಕಣ್ಣ..!

Upadhyaksha Movie: ಅಧ್ಯಕ್ಷನ ಅಖಾಡದಲ್ಲಿ ಉಪಾಧ್ಯಕ್ಷನ ಕಾಮಿಡಿ ಕಿಕ್! ನಾಯಕನಾಗಿಯೂ ಗೆದ್ದ ಚಿಕ್ಕಣ್ಣ..!

Published : Jan 29, 2024, 11:19 AM IST

ಸ್ಯಾಂಡಲ್‌ವುಡ್‌ಗೆ ಈ ವರ್ಷ ಭರ್ಜರಿ ಬಾಕ್ಸಾಫೀಸ್ ಕಲೆಕ್ಷನ್ ಆಗುವ ಸೂಚನೆ ಆರಂಭದಿಂದಲೇ ಸಿಗುತ್ತಿದೆ. ದರ್ಶನ್ ಕಾಟೇರ ಬಿಗ್ ಸಕ್ಸಸ್ ನಂತರ ಅದನ್ನೇ ಫಾಲೋ ಮಾಡ್ತಿದೆ. ಚಿಕ್ಕಣ್ಣನ ಉಪಾಧ್ಯಕ್ಷ. ಹಳ್ಳಿ ಸೊಗಡಿನ ಹಾಸ್ಯದ ಹೊನಲನ್ನ ಹೊತ್ತು ಬಂದ ಉಪಾಧ್ಯಕ್ಷನನ್ನು ಜನ ಒಪ್ಪಿಕೊಂಡಿದ್ದಾರೆ. ಚಿಕ್ಕಣ್ಣ ಹೀರೋ ಆಗಿಯೂ ಗೆದ್ದುಬಿಟ್ಟಿದ್ದಾರೆ.

ಭರ್ಜರಿ ಓಪನಿಂಗ್ ಪಡೆದು ಉಪಾಧ್ಯಕ್ಷ ಸಿನಿಮಾ( Upadhyaksha movie) ಬಾಕ್ಸಾಫೀಸ್‌ನಲ್ಲಿ ಕೋಟಿ ಲೂಟಿ ಮಾಡ್ತಿದೆ. ಸರಿಯಾಗಿ 10 ವರ್ಷಗಳ ಹಿಂದೆ ಶರಣ್ ನಾಯಕತ್ವದಲ್ಲಿ 'ಅಧ್ಯಕ್ಷ' ಸಿನಿಮಾ ಬಂದಿತ್ತು. ಶಿವರುದ್ರೇಗೌಡನ ಪಾತ್ರದಲ್ಲಿ ರವಿಶಂಕರ್ ಅಬ್ಬರಿಸಿದ್ದರು. ಹಾಗೆಯೇ, ಉಪಾಧ್ಯಕ್ಷ ನಾರಾಯಣನ ಪಾತ್ರದಲ್ಲಿ ಚಿಕ್ಕಣ್ಣ(Chikkanna) ಕೂಡ ಸ್ಕೋರ್ ಮಾಡಿದ್ದರು. ಇದೀಗ ಚಿಕ್ಕಣ್ಣ 'ಉಪಾಧ್ಯಕ್ಷ' ಅನ್ನೋ ಟೈಟಲ್‌ನಲ್ಲೇ ಸಿನಿಮಾ ಮಾಡಿ, ಅದರ ಮೂಲಕ ಹೀರೋ ಆಗಿದ್ದಾರೆ. 'ಅಧ್ಯಕ್ಷ' ಸಿನಿಮಾದಿಂದ 'ಉಪಾಧ್ಯಕ್ಷ' ಟೈಟಲ್ ಮಾತ್ರವಲ್ಲ, ಅದರ ಕಥೆಯನ್ನು ಹಾಗೇ ಕಂಟಿನ್ಯೂ ಮಾಡಿ, ಗಮನಸೆಳೆದಿದ್ದಾರೆ. ಮಲೈಕಾ ನಾಯಕಿಯಾಗಿ ಮಾರ್ಕ್ಸ್ ಸ್ಕೋರ್ ಮಾಡಿದ್ದಾರೆ, ನಿರ್ದೇಶಕ ಅನಿಲ್ ಮತ್ತು ನಿರ್ಮಾಪಕ ಉಮಾಪತಿ ಫುಲ್ ಖುಷ್ ಆಗಿದ್ದಾರೆ. ಇದೇ ಖುಷಿಯಲ್ಲಿ ಉಪಾಧ್ಯಕ್ಷನನ್ನು ಶಿವಣ್ಣ(Shivaraj Kumar) ಮತ್ತು ಧ್ರುವ ಸರ್ಜಾ(Dhruva Sarja) ವೀಕ್ಷಿಸಿ ಸಿನಿಮಾ ಸೂಪರ್ ಎಂದಿದ್ದಾರೆ. ಉಪಾಧ್ಯಕ್ಷ ಎಲ್ಲೆಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕಾಮಿಡಿ ಕಿಕ್ ಜೊತೆ ಭರಪೂರ ಮನರಂಜನೆ ಸಿನಿಮಾದಲ್ಲಿದೆ. ಉಪಾಧ್ಯಕ್ಷ ನಿರ್ಮಾಪಕ ಉಮಾಪತಿ  ಜೇಬು ತುಂಬಿಸೋದ್ರಲ್ಲಿ ನೋ ಡೌಟ್. 

ಇದನ್ನೂ ವೀಕ್ಷಿಸಿ: Pushpa 2: ಪುಷ್ಪ-2 ರಿಲೀಸ್ ಡೇಟ್ ಮುಂದಕ್ಕೆ ಹೋಯ್ತಾ..? ಟೀಂ ಹರಿಬಿಟ್ಟ ವಿಡಿಯೋದಲ್ಲಿ ಏನಿದೆ..?

03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
Read more