Sandalwood: ಗಂಧದಗುಡಿ ಕಡೆ ತಿರುಗಿದ ಭಾರತೀಯ ಚಿತ್ರರಂಗ: ಕನ್ನಡದ ಸಕ್ಸಸ್ ಸಿನಿಮಾಗಳ ಪಟ್ಟಿ ಕೊಟ್ಟ ಬಾಲಿವುಡ್

Sandalwood: ಗಂಧದಗುಡಿ ಕಡೆ ತಿರುಗಿದ ಭಾರತೀಯ ಚಿತ್ರರಂಗ: ಕನ್ನಡದ ಸಕ್ಸಸ್ ಸಿನಿಮಾಗಳ ಪಟ್ಟಿ ಕೊಟ್ಟ ಬಾಲಿವುಡ್

Published : Dec 25, 2022, 11:56 AM ISTUpdated : Dec 25, 2022, 12:18 PM IST

ಬಾಲಿವುಡ್ ಮಂದಿ ಈ ವರ್ಷ ಕನ್ನಡ ಸಿನಿಮಾರಂಗದ ಒಟ್ಟು ಕಲೆಕ್ಷನ್ ರಿಪೋರ್ಟ್ ಪಟ್ಟಿಯನ್ನು ಕೊಟ್ಟಿದ್ದಾರೆ. ಆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರೋ ಕೆಜಿಎಫ್ ಚಾಪ್ಟರ್-2.
 

ಕೆಜಿಎಫ್-2  ಭಾರತೀಯ ಚಿತ್ರರಂಗದಲ್ಲಿ ರೆಕಾರ್ಡ್ ಮಾಡಿದ ಸಿನಿಮಾ. 150 ಕೋಟಿಯಲ್ಲಿ ಸಿದ್ಧವಾಗಿದ್ದ ಈ ಸಿನಿಮಾ, 1,250 ಕೋಟಿ ಕಲೆಕ್ಷನ್ ಮಾಡಿದೆ. 1,000 ಕೋಟಿಗೂ ಹೆಚ್ಚು ಗಳಿಸಿದ ಮೊದಲ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆ ಕೆಜಿಎಫ್-2ಗೆ ಸಿಕ್ಕಿದೆ. ಅಷ್ಟೆ ಅಲ್ಲ ಈ ವರ್ಷ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಕೆಜಿಎಫ್-2 ಅನ್ನೋ ಹೆಗ್ಗಳಿಕೆ ಕೂಡ ಈ ಸಿನಿಮಾಗಿದೆ. ಇನ್ನು 2022ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಲೀಸ್ಟ್ ನಲ್ಲಿ ಕಾಂತಾರ ಕೂಡ ಇದೆ. ಬರೀ 16 ಕೋಟಿ ವೆಚ್ಚದಲ್ಲಿ ಸಿದ್ಧವಾಗಿದ್ದ ಕಾಂತಾರ, ಬರೋಬ್ಬರಿ 450 ಕೋಟಿ ವರ್ಲ್ಡ್ ವೈಡ್ ಕಲೆಕ್ಷನ್ ಮಾಡಿದೆ. ಕಡಿಮೆ ಬೆಜೆಟ್'ನಲ್ಲಿ ಸಿದ್ಧವಾದ ಸಿನಿಮಾ ಈ ಮಟ್ಟಕ್ಕೆ ಕಲೆಕ್ಷನ್ ಮಾಡಿದ್ದು ಇದೇ ಮೊದಲು ಅನ್ನೋ ಕೀರ್ತಿಗೂ ಕಾಂತಾರ ಕಾರಣ ಆಗಿದೆ. ಇನ್ನುಳಿದಂತೆ ರಕ್ಷಿತ್ ಶೆಟ್ಟಿಯ 777 ಚಾರ್ಲಿ ಸಿನಿಮಾ 40 ಕೋಟಿಯಲ್ಲಿ ನಿರ್ಮಾಣ ಆಗಿತ್ತು. ಇದರ ಒಟ್ಟು ಕಲೆಕ್ಷನ್ 150 ಕೋಟಿ. ಜೇಮ್ಸ್ ಸಿನಿಮಾ 45 ಕೋಟಿಯಲ್ಲಿ ಸಿದ್ಧವಾಗಿತ್ತು ಇದರ ಒಟ್ಟು ಕಲೆಕ್ಷನ್ 160 ಕೋಟಿ. 70 ಕೋಟಿಯಲ್ಲಿ ಸಿದ್ಧವಾಗಿದ್ದ ಕಿಚ್ಚನ ವಿಕ್ರಾಂತ್ ರೋಣ ಸಿನಿಮಾ 125 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಎಲ್ಲಾ ಸಿನಿಮಾಗಳು 100 ಕೋಟಿ ಕ್ಲಬ್ ಸೇರಿದ್ರೆ, ಆ ಸಿನಿಮಾಗ ಹಿಂದೆ ಗಾಳಿಪಟ-2, ಗಂಧದಗುಡಿ ಸಿನಿಮಾಗಳು 50 ಕೋಟಿ ಕ್ಲಬ್ ಸೇರಿವೆ. ಈ ಮೂಲಕ ಈ ವರ್ಷ ಭಾರತೀಯ ಬಾಕ್ಸಾಫೀಸ್ ನಲ್ಲಿ ಕನ್ನಡ ಸಿನಿಮಾಗಳದ್ದೇ ಮೇಲುಗೈ ಅಂತ ಇಡೀ ಸಿನಿಮಾ ಜಗತ್ತು ಹೇಳಿದೆ.

ಪಾಪ-ಮಮ್ಮ ಅನ್ಕೊಂಡು ಬಿಗ್ ಬಾಸ್‌ ಮನೆಯಿಂದ ಹೊರ ನಡೆದ ಅಮೂಲ್ಯ ಗೌಡ

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more