'ನರಸಿಂಹ'ನ ಕ್ರೇಜ್ ಶಿವಣ್ಣನಿಗಾಗಿ ಭಾರಿ ಡಿಮ್ಯಾಂಡ್: ಸೆಂಚುರಿ ಸ್ಟಾರ್‌ಗಾಗಿ ಡಾರ್ಲಿಂಗ್ ಪ್ರಭಾಸ್ ವೇಟಿಂಗ್!

'ನರಸಿಂಹ'ನ ಕ್ರೇಜ್ ಶಿವಣ್ಣನಿಗಾಗಿ ಭಾರಿ ಡಿಮ್ಯಾಂಡ್: ಸೆಂಚುರಿ ಸ್ಟಾರ್‌ಗಾಗಿ ಡಾರ್ಲಿಂಗ್ ಪ್ರಭಾಸ್ ವೇಟಿಂಗ್!

Published : Oct 09, 2023, 10:16 AM IST

ಡಾ.ಶಿವರಾಜ್ ಕುಮಾರ್ ತಲೈವಾ ರಜನಿಯಾ ಜೈಲರ್‌ನಲ್ಲಿ ನರಸಿಂಹನ ಅವತಾರ ಎತ್ತಿದ್ದೇ ಎತ್ತಿದ್ದು. ಅಬ್ಬಬ್ಬಾ ಅದೇನ್ ಕ್ರೇಜ್. ಅದೇನ್ ಖದರ್.. ತಮಿಳು ತೆಲುಗು ಬಿಗ್ ಸ್ಟಾರ್ಸ್ ಸೆಂಚುರಿ ಸ್ಟಾರ್‌ನನ್ನ ತಮ್ಮ ಸಿನಿಮಾಗೆ  ಕಾಸ್ಟ್ ಮಾಡ್ಬೇಕು ಅಂತ ಸಿಕ್ಕಾಪಟ್ಟೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಸೆಂಚುರಿ ಸ್ಟಾರ್‌ಗಾಗಿ ಈಗ ಡಾರ್ಲಿಂಗ್ ಪ್ರಭಾಸ್ ಕೂಡ ವೇಟಿಂಗ್‌ನಲ್ಲಿದ್ದಾರೆ.

ಡಾ.ರಾಜ್‌ಕುಮಾರ್‌ ನಟನೆಯ ‘ಬೇಡರ ಕಣ್ಣಪ್ಪ’(Bedara kannappa) ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ಹೊಸ ರೂಪದಲ್ಲಿ ‘ಭಕ್ತ ಕಣ್ಣಪ್ಪ’ನಾಗಿ ಮೂಡಿ ಬರುತ್ತಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಸಿನಿಮಾದಲ್ಲಿ ಬಾಹುಬಲಿ ಪ್ರಭಾಸ್ ಶಿವನ ರೋಲ್ ಮಾಡ್ತಾರಂತೆ. ಆದ್ರೆ ಅದಕ್ಕೂ ದೊಡ್ಡ ಇಂಟ್ರೆಸ್ಟಿಂಗ್ ಅಂದ್ರೆ ಈ ಸಿನಿಮಾಗೆ ಶಿವಣ್ಣ ಬೇಕೇ ಬೇಕು ಎನ್ನುತ್ತಿದ್ದಾರಂತೆ ಪ್ರಭಾಸ್. ಶಿವರಾಜ್ ಕುಮಾರ್(Shivaraj Kumar) ಈ ಹಿಂದೆ ಶಿವ ಮೆಚ್ಚಿದ ಕಣ್ಣಪ್ಪ ಸಿನಿಮಾ ಮಾಡಿದ್ರು. ಈಗ ತೆಲುಗಿನಲ್(Telugu) ಲಿ ಸಿದ್ಧವಾಗ್ತಿರೋ ಪ್ಯಾನ್ ಇಂಡಿಯಾ ಮೂವಿ ಭಕ್ತ ಕಣ್ಣಪ್ಪನಲ್ಲಿ ಶಿವಣ್ಣ ನಟಿಸಬೇಕು ಅಂತ ಪ್ರಭಾಸ್ ಬೇಡಿಕೆ ಇಟ್ಟಿದ್ದಾರಂತೆ. ತೆಲುಗಿನ ಭಕ್ತ ಕಣ್ಣಪ್ಪ ಚಿತ್ರದಲ್ಲಿ ಮಂಚು ವಿಷ್ಣು ಹೀರೋ ಆಗಿ ನಟಿಸುತ್ತಿದ್ದಾರೆ. ಶಿವಣ್ಣ ಅಥಿತಿ ಪಾತ್ರ ಮಾಡೋ ಸಾಧ್ಯತೆ ಇದೆ ಅಂತ ಟಾಕ್ ಇದೆ. ಭಕ್ತ ಕಣ್ಣಪ್ಪನಲ್ಲಿ ಪ್ರಭಾಸ್(prabhas) ಶಿವನ ರೋಲ್ ಮಾಡ್ತಾರೆ. ನಯನತಾರ ಪಾರ್ವತಿಯಂತೆ. ಶಿವಣ್ಣನ ರೋಲ್ ಯಾವ್ದು ಅನ್ನೋದೇ ಈಗ ಕುತೂಹಲ. ಇದರ ಜತೆಗೆ ಮಲೆಯಾಳಂ ನಟ ಮೋಹನ್ ಲಾಲ್ ಕೂಡ ಅತಿಥಿ ಪಾತ್ರ ಮಾಡ್ತಾರೆ ಅಂತ ಸುದ್ದಿ ಹರಿದಾಡ್ತಿದೆ. ಮೋಹನ್ ಬಾಬು ' ಭಕ್ತ ಕಣ್ಣಪ್ಪ' ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ನ್ಯೂಜಿಲ್ಯಾಂಡ್‌ನಲ್ಲಿ ಸಿನಿಮಾದ ಕಂಪ್ಲೀಟ್ ಶೂಟಿಂಗ್ ಆಗುತ್ತಂತೆ. ಭಕ್ತ ಕಣ್ಣಪ್ಪ ಸಿನಿಮಾಗೆ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ಆದ್ರೆ ಪ್ರಭಾಸ್, ಮೋಹನ್ ಲಾಲ್ ಹಾಗು ಶಿವಣ್ಣ ಕಾಂಬಿನೇಷನ್ ಪ್ಯಾನ್ ಇಂಡಿಯಾದಲ್ಲಿ ಸೌಂಡ್ ಮಾಡೋದು ಗ್ಯಾರಂಟಿ.

ಇದನ್ನೂ ವೀಕ್ಷಿಸಿ:  'OG' ಎಂಟ್ರಿಗೆ ಕೌಂಟ್‌ಡೌನ್‌: ಮಧ್ಯ ರಾತ್ರಿಯೇ ಕಾಡುತ್ತಾ 'GHOST'..?

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
Read more