ಮೇರುನಟಿ ಚಂದನವನದ ನಗುಮೊಗದ ಚೆಲುವೆ ಲೀಲಮ್ಮ! ದೇವರ ಗುಡಿ ಸೇರಿದ ಅಭಿನೇತ್ರಿ !

ಮೇರುನಟಿ ಚಂದನವನದ ನಗುಮೊಗದ ಚೆಲುವೆ ಲೀಲಮ್ಮ! ದೇವರ ಗುಡಿ ಸೇರಿದ ಅಭಿನೇತ್ರಿ !

Published : Dec 10, 2023, 09:28 AM IST

ಪ್ರಾಣಿ ಪಶು ಪಕ್ಷಿಗಳೆಂದರೆ ಬಹಳವಾಗಿ ಪ್ರೀತಿಸುತ್ತಿದ್ದವರು ಲೀಲಾವತಿ. ಕೊನೆ ಉಸಿರೆಳೆಯುವ ಮುನ್ನವಷ್ಟೆ ಪಶು ಆಸ್ಪತ್ರೆ ಕಟ್ಟಿಸಿ ಉದ್ಘಾಟನೆ ಮಾಡಿ ತನ್ನ ಕೊನೆಯ ಆಸೆ ಈಡೇರಿಸಿಕೊಂಡಿದ್ದರು.

ಚಂದನವನದ ನಗುಮೊಗದ ಚೆಲುವೆ, ಸ್ವಾಭಾಮಾನದ  ನಲ್ಲೆ  ಕನ್ನಡ ಚಿತ್ರರಂಗದ(Kannada film industry)  ಶ್ರೇಷ್ಠ ಅಭಿನೇತ್ರಿ ಲೀಲಾವತಮ್ಮ ಇನ್ನಿಲ್ಲ. ನೆರೆ ಹೊರೆಯವರ ಮನೆಯಲ್ಲಿ ಮುಸುರೆ ಪಾತ್ರೆ ತೊಳೆದು ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿ. ಜೀವನದುದ್ದಕ್ಕೂ ಮುಳ್ಳಿನ ಹಾದಿಯಲ್ಲೇ ನಡೆಯುತ್ತಾ  ಮೇರು ನಟಿಯಾಗಿ ನಿರ್ಮಾಪಕಿಯಾಗಿ ಬೆಳೆದು ಹೂವಿನ ಮಾಲೆ ಹಾಕಿಸಿಕೊಂಡ ಸ್ವಾಭಿಮಾನದ ನಟಿ. ದಕ್ಷಿಣ ಭಾರತ ಚಲನಚಿತ್ರರಂಗದಲ್ಲಿ  600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಲೀಲಾವತಿ ಅವರಿಗೆ(Leelavathi) 85 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಕಳೆದ ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದರು. ತೀವ್ರ ಉಸಿರಾಟದ ತೊಂದರೆಯಿಂದಾಗಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು. ಲೀಲಾವತಿಯವರ ನಿಧನಕ್ಕೆ(Died) ಪ್ರಧಾನಿ ಮೋದಿಯವರಿಂದ ಹಿಡಿದು ಸಿಎಂ ಮಾಜಿ ಸಿಎಂ ಸೇರಿದಂತೆ ಸಿನಿಮಾ ರಾಜಕೀಯ ಎರಡೂ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. ಲೀಲಾವತಿಯವರ ಏಕೈಕ ಪುತ್ರ ವಿನೋದ್ ರಾಜ್(Vinod Raj) ದುಖದ ಕಟ್ಟೆ ಒಡೆದಿದ್ದು. ಅವರನ್ನು ಈ ಸ್ಥಿತಿಯಲ್ಲಿ ನೋಡಲು ಎಂಥವರಿಗೂ ಕರುಳು ಚುರ್ ಎನ್ನುವಂತಿದೆ. ಇವರ ಬಾಂಧವ್ಯವನ್ನು ನೋಡಿ ತಾಯಿ ಮಗ ಅಂದ್ರೆ ಹೀಗಿರಬೇಕಪ್ಪಾ ಎಂದವರೆ ಹೆಚ್ಚು. ದೇವರ ಆಟ ಬಲ್ಲವರ್ಯಾರು . ವಿಧಿ ಬಹಳ ಕ್ರೂರಿ ಎನ್ನುವುದಷ್ಟೆ ಸತ್ಯ.

ಇದನ್ನೂ ವೀಕ್ಷಿಸಿ:  ಮಗನನ್ನು ಅನಾಥನನ್ನಾಗಿಸಿ ಹೋದ ಲೀಲಾವತಿ ! ಮುದ್ದಿನ ಪುತ್ರನಿಗೆ ಕಲಿಸಿದ್ದು ಅದೆಂಥಾ ಸಂಸ್ಕಾರ..?

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more