Jun 20, 2023, 3:21 PM IST
ಆದಿಪುರುಷ್ ಸಿನಿಮಾ ರಿಲೀಸ್ ಆಗಿದ್ದೆ ಆಗಿದ್ದು. ರಾಮಾಯಣವನ್ನೆ ತಿರುಚಲಾಗಿದೆ. ಇದು ರಾಮಾಯಣ ಕತೆಯೇ ಅಲ್ಲ. ನಿರ್ದೇಶಕರು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಈ ಚಿತ್ರದಲ್ಲಿರುವ ಆಕ್ಷೇಪಾಣಾರ್ಹ ಸಂಭಾಷಣೆಯನ್ನೆಲ್ಲಾ ತೆಗೆಯಬೇಕು. ಇಲ್ಲವಾದರೇ ಸಿನಿಮಾನೆ ಬ್ಯಾನ್ ಮಾಡ್ತೀವಿ ಎಂದು ನೇಪಾಳ ಕಂಠ್ಮಂಡು ನಗರದಲ್ಲಿ ಈಗಾಗಲೇ ದೊಡ್ಡ ವಿವಾದವೆದ್ದಿದೆ. ಈ ನಡುವೆ. ಆದಿಪುರುಷ್ ಎಫೆಕ್ಟ್ ನಿಂದಾಗಿ ಅಷ್ಟೆ ಅಲ್ಲದೆ ಇನ್ಮುಂದೆ ಯಾವುದೇ ಬಾಲಿವುಡ್ ಸಿನಿಮಾ ರಿಲೀಸ್ ಆದರೂ ಪಾಲಿಸಲೇಬೇಕಾದ ಹೊಸ ರೂಲ್ಸ್ ತಂದಿದೆ ಕಠ್ಮಂಡು ಸರ್ಕಾರ.
ಕಠ್ಮಂಡು ಮೇಯರ್ ಬಾಲೇಂದ್ರ ಶಾ ಅವರು ಹೊಸ ಆದೇಶ ಹೊರಡಿಸಿದ್ದಾರೆ.ಈ ಆದೇಶದ ಅಡಿಯಲ್ಲಿ ಕಠ್ಮಂಡುವಿನಲ್ಲಿ ‘ಆದಿಪುರುಷ್’ ಸಿನಿಮಾ ಪ್ರದರ್ಶನಗೊಳ್ಳುವಂತಿಲ್ಲ. ಅಷ್ಟೇ ಅಲ್ಲ ಬಾಲಿವುಡ್‌ನ ಎಲ್ಲಾ ಚಿತ್ರಗಳನ್ನು ಅವರು ಬ್ಯಾನ್ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಆಶಾಡ ಮಾಸದಲ್ಲಿ ಆಶಿಕಾಗೆ ಮದುವೆ ಆಸೆ: ನಟಿಗೆ ಗಂಡನಾಗೋ ಹುಡುಗ ಆ ನಟನಂತಿರಬೇಕೆಂತೆ !