May 30, 2023, 12:24 PM IST
ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಹೀಗಂದ್ರೆ ನಿಮಗ್ಯಾರಿಗೂ ತಟ್ ಅಂತ ಅರ್ಥ ಆಗಲ್ಲ. ಅದೇ ಮಂಡ್ಯದ ಗಂಡು ಅಂದ್ರೆ ಅದು ಅಂಬರೀಶ್ ಅಂತ ಹೇಳ್ಬಿಡ್ತಿರಾ ಅಲ್ವಾ. ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್‌ಗೆ ನಿನ್ನೆ ಹುಟ್ಟುಹಬ್ಬದ ಸಂಭ್ರಮ. ಅಂಬಿ 71ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕನ್ನಡಿಗರ ಈ ಕುಚಿಕು ಗೆಳೆಯನ ಹುಟ್ಟುಹಬ್ಬವನ್ನ ಅಭಿಮಾನಿಗಳು ಹಾಗೂ ಕುಟುಂಬದವರು ವಿಶೇಷವಾಗಿ ಆಚರಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಭರ್ಜರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಸುಮಲತಾ ಅಂಬರೀಶ್ ಪತಿಯ ಸಮಾಧಿಗೆ ಪೂಜೆ ಮಾಡಿ ಬಂದಿದ್ದ ಅಭಿಮಾನಿಗಳಿಗೆ ಸಿಹಿ ಹಂಚಿದ್ರು.
ಇದನ್ನೂ ವೀಕ್ಷಿಸಿ: Happy Birthday Ambareesh: ಅಂಬಿ ಸಮಾಧಿ ಮೇಲೆ ಅಭಿಷೇಕ್-ಅವಿವಾ ಮದುವೆ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ