2022ರಲ್ಲಿ ಇಡೀ ಭಾರತೀಯ ಚಿತ್ರ ಜಗತ್ತೇ ಕನ್ನಡದತ್ತ ತಿರುಗಿ ನೋಡುವಂತಹ ಸಾಧನೆ ಸ್ಯಾಂಡಲ್ ವುಡ್ ಮಾಡಿದೆ. ಇದರ ಜೊತೆ ಕಾಂಟ್ರವರ್ಸಿಯಿಂದಲೂ ನಮ್ಮ ಚಿತ್ರರಂಗ ಸಾಕಷ್ಟು ಸುದ್ದಿ ಮಾಡಿದೆ.
ಈ ವರ್ಷ ಸ್ಯಾಂಡಲ್ ವುಡ್'ನಲ್ಲಾದ ವಿವಾದಗಳ ಪಟ್ಟಿ ಮಾಡಿದ್ರೆ ಮೊದಲು ಸಿಗೋಗು ಕಿಚ್ಚ ಸುದೀಪ್ ಹಾಗೂ ಅಜಯ್ ದೇವಗನ್ ಮಧ್ಯೆ ರಾಷ್ಟ್ರ ಭಾಷೆಯ ಬಗ್ಗೆ ನಡೆದ ಟ್ವಿಟರ್ ಜಟಾಪಟಿ.
ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಸುದೀಪ್ ನೀಡಿದ್ದ ಹೇಳಿಕೆಗೆ ಅಜಯ್ ದೇವಗನ್ ಇನ್ಮುಂದೆ ಹಿಂದಿಯಲ್ಲಿ ಸಿನಿಮಾ ಮಾಡಬೇಡಿ ಅಂತ ಕಿಚ್ಚನಿಗೆ ಟಾಂಗ್ ಕೊಟ್ಟಿದ್ರು. ಕೊನೆಗೆ ಸಮಸ್ತ ಕನ್ನಡಿಗರು ಕಿಚ್ಚನ ಬೆಂಬಲಕ್ಕೆ ನಿಂತಿದ್ರು. ಇದು ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾ ಕೂಡ ವಿವಾದವನ್ನು ಮೈಮೇಲೆ ಎಳೆದುಕೊಂಡಿತ್ತು. ಮಲಯಾಳಂನ ನವರಸಮ್ ಎಂಬ ಆಲ್ಬಂ ಹಾಡಿನಿಂದ ಕದಿಯಲಾಗಿದೆ ಎಂದು ಥೈಕ್ಕುಡಂ ಬ್ರಿಡ್ಜ್ ಆರೋಪ ಮಾಡಿ ಕೋರ್ಟ್ ಮೊರೆ ಹೋಗಿದ್ರು. ಹೀಗಾಗಿ ವರಾಹರೂಪಂ ಹಾಡಿದ ಟ್ಯೂನ್ ಬದಲಾಯಿಸಲಾಗಿತ್ತು. ಕೊನೆಗೆ ಕೋರ್ಟ್ ನಲ್ಲಿ ಗೆದ್ದ ಕಾಂತಾರ ಚಿತ್ರತಂಡಕ್ಕೆ ವರಾಹರೂಪಂನ ಹಳೆ ಟ್ಯೂನ್ಅನ್ನೇ ಬಳಸಿಕೊಳ್ಳೋಕೆ ನ್ಯಾಯಾಲಯದಿಂದ ಅನುಮತಿ ಸಿಕ್ಕಿತ್ತು.ಡಾಲಿ ಧನಂಜಯ್ ನಟಿಸಿದ್ದ ಡಾನ್ ಜಯರಾಜ್ ಬಯೋಪಿಕ್ ಹೆಡ್ ಬುಷ್ ಕೂಡ ವಿವಾದದ ಗೂಡಾಗಿತ್ತು. ಈ ಸಿನಿಮಾದಲ್ಲಿ ವೀರಗಾಸೆ ಹಾಗೂ ಕರಗಕ್ಕೆ ಅವಮಾನ ಮಾಡಿದ್ದಾರೆ ಅಂತ ವೀರಗಾಸೆ ಕಲಾವಿಧರು, ಕರಗ ಆಯೋಜಕರು ಆರೋಪ ಮಾಡಿ ಹೆಡ್ಬುಷ್ ಸಿನಿಮಾದ ಪೋಸ್ಟರ್ ಹರಿದುಹಾಕಿದ್ರು.