ಎಲೆಮರೆಯ ಕಾಯಿಯಂತಿದ್ದ ಸಾಧಕಿಯರ ಗುರುತಿಸಿ ಸನ್ಮಾನಿಸಿದ ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ

ಎಲೆಮರೆಯ ಕಾಯಿಯಂತಿದ್ದ ಸಾಧಕಿಯರ ಗುರುತಿಸಿ ಸನ್ಮಾನಿಸಿದ ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ

Published : Jul 02, 2025, 11:57 AM IST
ಉತ್ತರ ಕರ್ನಾಟಕದ ಎಲೆಮರೆ ಕಾಯಂತೆ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸುವರ್ಣ ಸಾಧಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಬೆಳಗಾವಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸುದ್ದಿ ಪ್ರಸಾರ ನಮ್ಮ ಕರ್ತವ್ಯ. ಅದನ್ನೆಂದು ಬಿಟ್ಟಿಲ್ಲ. ಬಿಡುವುದೂ ಇಲ್ಲ. ಆದರೆ, ಸುದ್ದಿಯಾಚೆಗೆ ಸಾಮಾಜಿಕ ಜವಾಬ್ದಾರಿ ನಿರ್ವಹಣೆಯಲ್ಲೂ ನಾವು ಮುಂದಿದ್ದೇವೆ. ಕೊಡಗು ಹಾಗೂ ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿದಾಗ ಸಂತ್ರಸ್ತರಿಗೆ ನಮ್ಮ ವೀಕ್ಷಕರ ನೆರವಿನೊಂದಿಗೆ ಮೊದಲು ಧಾವಿಸಿದ ಮಾಧ್ಯಮ ಸಂಸ್ಥೆ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್.

ಸಾಧಿಸಿದ್ದರೂ ಸಮಾಜದ ಗುರುತಿಸುವಿಕೆ, ಗೌರವದಿಂದ ವಂಚಿತರಾದವರನ್ನು ಗುರುತಿಸಿ ಗೌರವಿಸಿ ಪ್ರಚಾರ ಮಾಡುವುದುನ್ನೂ ಕೂಡ ಆರಂಭಿಸಿದ್ದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್. ಅಸಾಮಾನ್ಯ ಸಾಧಕರಿಗಾಗಿ ಅಸಾಮಾನ್ಯ ಕನ್ನಡಿಗ, ಅತ್ಯುತ್ತಮ ರೈತರಿಗಾಗಿ ರೈತ ರತ್ನ, ಶೌರ್ಯ ಪ್ರಶಸ್ತಿ, ಉದ್ಯಮಿಗಳಿಗಾಗಿ ಕರ್ನಾಟಕ ಬ್ಯೂಸಿನೆಸ್ ಅವಾರ್ಡ್ಸ್, ಉತ್ತಮ ವೈದ್ಯಕೀಯ ಸೇವೆಗಾಗಿ ಹೆಲ್ತ್ ಎಕ್ಸಲೆನ್ಸ್ ಅವಾರ್ಡ್, ಅತ್ಯುತ್ತಮ ಇಂಜಿನಿಯರ್ಸ್ಗಳನ್ನು ಪುರಸ್ಕರಿಸಲೆಂದು ಎಮಿನೆಂಟ್ ಇಂಜಿನಿಯರ್ಸ್ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುತ್ತಿದ್ದೇವೆ. ನಮ್ಮಿಂದ ಗುರುತಿಸಲ್ಪಟ್ಟ ನಂತರದಲ್ಲಿ ಅನೇಕರಿಗೆ ರಾಜ್ಯ, ರಾಷ್ಟ್ರ, ಪದ್ಮ ಪ್ರಶಸ್ತಿಗಳು ಸಂದಿರುವುದು ನಮ್ಮ ಹೆಮ್ಮೆ.

ಕರುನಾಡಿನ ಸಾಧಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಶುರು ಮಾಡಿದ್ದೂ ಕೂಡ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್. ಬಹರೇನ್, ದುಬೈ, ಮಲೇಷ್ಯಾ, ವಿಯೇಟ್ನಾಂ, ಇಂಗ್ಲೆಂಡ್, ಹಾಂಗ್ಕಾಂಗ್ ಸೇರಿ ಒಟ್ಟು ಏಳು ಅಂತಾರಾಷ್ಟ್ರೀಯ ಕಾರ್ಯಕ್ರಮ ನಡೆಸಿ ಯಶಸ್ವಿಯಾಗಿದ್ದೇವೆ.

ಇದೇ ರೀತಿಯಾಗಿ ಮಹಿಳಾ ಸಾಧಕಿಯರಿಗಾಗಿ ಸುವರ್ಣ ಸಾಧಕಿ ಪ್ರಶಸ್ತಿ ನೀಡಲೆಂದೇ ಬೆಳಗಾವಿಯಲ್ಲಿ ಸೇರಿದ್ದೇವೆ. ಉತ್ತರ ಕರ್ನಾಟಕದ ಸಾಧಕಿಯರಿಗೆ ಆದ್ಯತೆ ಕೊಟ್ಟು ಈ ಕಾರ್ಯಕ್ರಮ ಸಂಘಟಿಸಲಾಗಿದೆ. ಎಲೆಮರೆ ಕಾಯಂತೆ ಪುರುಷರಿಗೆ ಸರಿಸಮನಾಗಿ ಸೇವೆಯಲ್ಲಿ ತೊಡಗಿರುವವರನ್ನು ಹುಡುಕಿ ಹೆಕ್ಕಿ ನಿಮ್ಮ ಮುಂದೆ ತಂದಿದ್ದೇವೆ. ಈ ಪ್ರಶಸ್ತಿಯು ಪುರಸ್ಕೃತರಿಗೆ ಇನ್ನಷ್ಟು ಸಾಧಿಸಿ ಮುನ್ನಡೆಯಲು ಶಕ್ತಿ ತುಂಬಲಿ. ಇದನ್ನು ನೋಡುವವರಿಗೆ ಪ್ರೇರಣೆಯಾಗಲಿ ಎಂದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾರೈಸುತ್ತದೆ.

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
20:18ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
Read more