Jan 4, 2025, 3:21 PM IST
ಬೆಂಗಳೂರು: ಆವತ್ತು ಡಿಸೆಂಬರ್ 31. ಇಡೀ ಜಗತ್ತು ಹೊಸ ವರ್ಷವನ್ನು ವೆಲ್ಕಮ್ ಮಾಡಲು ಕಾತುರವಾಗಿತ್ತು. ಎಲ್ಲಾ ಕಡೆ ಪಾರ್ಟಿಗಳೂ ಆಯೋಜನೆಗೊಂಡಿದ್ವು. ಆದ್ರೆ ನ್ಯೂ ಇಯರ್ ಪಾರ್ಟಿಯ ಸಮಯದಲ್ಲೇ ಒಂದು ಹುಡುಗಿ ವಿಶ್ ಮಾಡಿದವನಿಗೇ ಚಾಕು ಹಾಕಿಬಿಟ್ಟಿದ್ದಳು. ಸೀನ್ ಕಟ್ ಮಾಡಿದ್ರೆ ಅಲ್ಲೊಂದು ಲವ್ ಸ್ಟೋರಿ ಓಪನ್ ಆಗಿತ್ತು.
ಈ ಕಥೆಯನ್ನ ನಾವು ಮೊನ್ನೇಯೇ ಹೇಳಿದ್ವಿ. ಆದ್ರೆ ಇವತ್ತು ಇದೇ ಕೇಸ್ಗೆ ಚಾಕು ಹಾಕಿದ ಹುಡುಗಿಯೇ ಟ್ವಿಸ್ಟ್ ಕೊಟ್ಟುಬಿಟ್ಟಿದ್ದಾಳೆ. ಆವತ್ತು ಚಾಕು ಇರಿತಕ್ಕೆ ಒಳಗಾದ ಯುವಕನ ಕುಟುಂಬ ಲವ್ ಬ್ರೇಕ್ ಅಪ್ ಆಗಿದ್ದಕ್ಕೇ ಚಾಕು ಹಾಕಿದ್ದಾಳೆ ಅಂತ ಹೇಳಿದ್ರು. ಆದ್ರೆ ಈಗ ಆ ಯುವತಿ ಹೊಸ ಕಥೆ ಹೇಳ್ತಿದ್ದಾಳೆ. ಹಾಗಾದ್ರೆ ಆ ಹುಡುಗಿ ಹೇಳಿದ್ದೇನು? ಆಕೆ ನಿಜಕ್ಕೂ ಚಾಕು ಇರಿದಿದ್ದು ಯಾಕೆ? ನ್ಯೂ ಇಯರ್ ಪಾರ್ಟಿಯಲ್ಲಿ ನಡೆದ ಒಂದು ಡೆಡ್ಲಿ ಅಟ್ಯಾಕ್ನ ಮುಂದುವರೆದ ಭಾಗವೇ ಇವತ್ತಿನ ಎಫ್.ಐ.ಆರ್