‘ಡಿಕೆ ಮುಕ್ತವಾಗಿ ಬಂದರೆ ಸಂತಸ ಪಡುವವ ನಾನು’ BSY ಅಚ್ಚರಿ

Sep 3, 2019, 10:33 PM IST

ಡಿಕೆ ಶಿವಕುಮಾರ್ ಬಂಧನದ ನಂತರ  ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು ಡಿಕೆಶಿ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.  ಡಿಕೆ ಶಿವಕುಮಾರ್ ಇದರಿಂದ ಮುಕ್ತರಾಗಿ ಬಂದರೆ ಎಲ್ಲರಿಗಿಂತಲೂ ನಾನು ಹೆಚ್ಚು ಸಂತೋಷ ಪಡುತ್ತೇನೆ ಎಂದು ಯಡಿಯೂರಪ್ಪ ಅಚ್ಚರಿಯ ಹೇಳಿಕೆ ನೀಡಿದ್ದಾರೆ.  ನನ್ನ ಜೀವನದಲ್ಲಿ ನಾನು ಯಾರನ್ನೂ ದ್ವೇಷ ಮಾಡಿಲ್ಲ. ನಾನು ಯಾರಿಗೂ ಕೆಟ್ಟದನ್ನು ಮಾಡಿಲ್ಲ. ಕೆಲವು ಸಂದರ್ಭದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಎಂದು ಯಡಿಯೂರಪ್ಪ ಹೇಳಿದರು.