ಚಿಕಿತ್ಸೆಗೆ ಬೆಡ್ ರೆಡಿ ಮಾಡಲು ರಾಜ್ಯ ಸರ್ಕಾರ ಸರ್ಕಸ್..!

2, Jul 2020, 5:56 PM

ಬೆಂಗಳೂರು(ಜು.02): ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಚಿಕಿತ್ಸೆಗಾಗಿ ಬೆಡ್ ರೆಡಿ ಮಾಡಲು ಪರದಾಡುತ್ತಿದೆ. ಹಲವು ಕಡೆಗಳಲ್ಲಿ ಬೆಡ್ ಹುಡುಕಲು ಅಧಿಕಾರಿಗಳು ಪರದಾಡುತ್ತಿದ್ದಾರೆ.

ಆಸ್ಪತ್ರೆ ಕಟ್ಟಡಗಳಿದ್ದರು ಅಧಿಕಾರಿಗಳು ಡೋಂಟ್‌ ಕೇರ್ ಎನ್ನುತ್ತಿದ್ದಾರೆ, ಇದರೊಂದಿಗೆ ಅಧಿಕಾರಿಗಳ ಬೇಜವ್ದಾರಿತನ ಮತ್ತೊಮ್ಮೆ ಬಟಾಬಯಲಾಗಿದೆ. ಶಿವಾಜಿನಗರಲ್ಲಿ 500 ಬೆಡ್‌ಗಳ ವ್ಯವಸ್ಥೆಯಿರುವ ಬಹುಮಹಡಿ ಆಸ್ಪತ್ರೆ ಸಿದ್ದವಿದೆ. ಆದರೆ ಅಧಿಕಾರಿಗಳು ಆ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ.

ಬೆಂಗಳೂರು ಗ್ರಾಮಾಂತರ ಡಿಸಿಗೆ ಕೊರೋನಾ ವೈರಸ್..?

ಸ್ವಲ್ಪ ಹಣ ಖರ್ಚು ಮಾಡಿದರೂ ಬಿಬಿಎಂಪಿಗೆ ಕೊರೋನಾ ನಿರ್ವಹಣೆ ಮಾಡಲು ಅವಕಾಶ ಸಿಗುತ್ತೆ. ಎಲ್ಲಾ ವ್ಯವಸ್ಥೆಗಳಿರುವ ಆಸ್ಪತ್ರೆಯನ್ನು ಪಡೆಯುಬ ಬಗ್ಗೆ ಅಧಿಕಾರಿಗಳು ಮನಸು ಮಾಡುತ್ತಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.