
ಏಷ್ಯಾನೆಟ್ ಸುವರ್ಣ ನ್ಯೂಸ್ ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಿದೆ. ಪ್ರಭುದೇವ ಮತ್ತು ಜಸ್ಕರನ್ ಸಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಂಗಳೂರು (ಜ.1): ಇಡೀ ಜಗತ್ತು ಅದ್ಭುತವಾಗಿ ಹೊಸ ವರ್ಷವನ್ನು ಸ್ವಾಗತಿಸಿದೆ. ಬೆಂಗಳೂರಿನಲ್ಲೂ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಅದರಂತೆ ಕನ್ನಡದ ನೇರ, ದಿಟ್ಟ, ನಿರಂತರ ಸುದ್ದಿವಾಹಿನಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೂಡ ವಿಶೇಷವಾಗಿ ಹೊಸ ವರ್ಷವನ್ನು ಸ್ವಾಗತ ಮಾಡಿದೆ. ಹೊಸ ವರ್ಷದ ಅತಿಥಿಯಾಗಿ ಭಾರತದ ಮೈಕೆಲ್ ಜಾಕ್ಸನ್ ಪ್ರಭುದೇವ ಕಚೇರಿಗೆ ಆಗಮಿಸಿ ಸುದ್ದಿ ಮಾಡುವವರ ಎದುರು ಸದ್ದು ಮಾಡಿದರು. ಸುವರ್ಣ ಪಾರ್ಟಿಯಲ್ಲಿ 'ಜೇನ ದನಿಯೋಳೆ ಮೀನ ಕಣ್ಣೋಳೆ..' ಹಾಡಿನ ಗಾಯಕ ಜಸ್ಕರನ್ ಸಿಂಗ್ ಮೋಡಿ ಮಾಡಿದರು. ಗಿಲ್ಲಿನಟ ಕಾಮಿಡಿ ಕೂಡ ಸಖತ್ ಎಂಟರ್‌ಟೇನಿಂಗ್ ಆಗಿತ್ತು.
ಏಷ್ಯಾನೆಟ್ ಸುವರ್ಣನ್ಯೂಸ್ ನ್ಯೂಇಯರ್ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಾಯಕರಾದ ಅನಿರುದ್ಧ್ & ಐಶ್ವರ್ಯಾ