ತಿಂದವರೇ ಬಲ್ಲವರು ಕಲ್ಲು ಲಾಂಬಿನ ರುಚಿ; ಹುಡುಕುವುದು ಮಾತ್ರ ಸವಾಲೇ ಸರಿ!

Jul 14, 2021, 6:08 PM IST

ಉಡುಪಿ (ಜು. 14): ಮುಂಗಾರು ಪ್ರಾರಂಭವಾದಾಗ ಭೂಮಿ ತಂಪಾದಾಗ ಮಣ್ಣಿನಲ್ಲಿ ಲಾಂಬು/ಕಲ್ಲಣಬೆ ಹುಟ್ಟಿಕೊಳ್ಳುತ್ತದೆ. ಇದರ ರುಚಿ ಅದ್ಭುತವಾಗಿರುತ್ತದೆ. ಇದನ್ನು ಹುಡುಕಲು ಆ ಭಾಗದ ಜನರು ಗುಡ್ಡಗಳಿಗೆ ತೆರಳುತ್ತಾರೆ. ಭೂಮಿಯಲ್ಲಿ ಪುಟ್ಟ ಮೊಟ್ಟೆಯಾಕಾರದಲ್ಲಿ ಹುದುಗಿರುತ್ತದೆ. ಅದನ್ನು ಹೆಕ್ಕಿ ತೆಗೆಯುವುದೇ ಒಂದು ಸವಾಲು. ಕಲ್ಲಣಬೆಯಿಂದ ತಯಾರಿಸಿದ ಖಾದ್ಯ, ಬಹುತೇಕರ ಹಾಟ್ ಫೇವರೇಟ್.