ಕನ್ನಡ ಕುಲಪುರೋಹಿತ ಅನ್ನೋ ಬದಲು, ಕನ್ನಡ ಕುಲಹೋಯಿತು ಎಂದ ಡಿಸಿಎಂ..!

Nov 1, 2019, 2:00 PM IST

ಕೊಪ್ಪಳ(ನ.01): ಕನ್ನಡ ರಾಜ್ಯೋತ್ಸವದಂದೇ ಭಾಷಣದಲ್ಲಿ ತಪ್ಪು ತಪ್ಪಾಗಿ ಕನ್ನಡ ಮಾತನಾಡುವ ಮೂಲಕ ಡಿಸಿಎಂ ಲಕ್ಷ್ಮಣ್ ಸವದಿ ಟೀಕೆಗೆ ಗುರಿಯಾಗಿದ್ದಾರೆ. ರಾಷ್ಟ್ರಕವಿಯ ಹೆಸರನ್ನೇ ತಪ್ಪಾಗಿ ಉಚ್ಛರಿಸಿದ ಡಿಸಿಎಂ ಬಗ್ಗೆ ತೀವ್ರ ಟೀಕೆ ಕೇಳಿ ಬರುತ್ತಿದೆ. ಕನ್ನಡ ರಾಜ್ಯೋತ್ಸವ ದಿನದಂದೇ ಕನ್ನಡದ ಕಗ್ಗೊಲೆ ಮಾಡಲಾಗಿದೆ.

ಕೊಪ್ಪಳದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಭಾಗವಹಿಸಿದ್ದಾರೆ. ಭಾಷಣ ಸಂದರ್ಣ ಮಾತನಾಡಿದ ಅವರು, ಕರ್ನಾಟಕ ರಾಜ್ಯೋತ್ಸವದ ಭಾಷಣದಲ್ಲಿಯೇ ಕನ್ನಡ ಕಗ್ಗೊಲೆ ಮಾಡಿ ಟೀಕೆಗೊಳಗಾಗಿದ್ದಾರೆ.

ಉದಯವಾಗಲಿ ಅಲ್ಲ, ಉದವಾಗಲಿ ಎಂದ್ರು ಸವದಿ..!

ಕೊಪ್ಪಳದಲ್ಲಿ ಕರ್ನಾಟಕ ರಾಜ್ಯೋತ್ಸವದ ಭಾಷಣದ ವೇಳೆ ಡಿಸಿಎಂ ಸವದಿ ತಪ್ಪು ತಪ್ಪಾಗಿ ಕನ್ನಡ ಓದಿದ್ದಾರೆ. ಭಾಷಣದ ವೇಳೆ ಕನ್ನಡವನ್ನು ತಪ್ಪಾಗಿ ಓದಿದ ಸವದಿ ರಾಜ್ಯೋತ್ಸವ ಸಂದೇಶ ನೀಡುವ ಭಾಷಣ ಸಾಲಿನಲ್ಲಿದ್ದ ಉದಯವಾಯಿತು ನಮ್ಮ ಚೆಲುವ ಕನ್ನಡನಾಡು ಎಂಬ ಸಾಲಿನಲ್ಲಿ ಉದವಾಯಿತು ಎಂದು ಹೇಳಿದ್ದಾರೆ.

ರಾಷ್ಟ್ರ ಕವಿಗಳ ಹೆಸರು ಹೇಳುವಾಗ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಹೆಸರನ್ನು ಶಿವರುದ್ರಯ್ಯ ಎಂದು ಹೇಳಿದ್ದಾರೆ. ಪ್ರಗತಿ ಎನ್ನುವ ಬದಲು ಪ್ರತಿಗತಿ, ಹೋರಾಡಿದ್ದಾರೆ ಎನ್ನುವ ಬದಲು ಹೌರಾಡಿದ್ದಾರೆ, ರಾಜ್ಯೋತ್ಸವ ಎನ್ನುವ ಬದಲು ರಾಜ್ಯೋಸ್ತವ , ಮುತ್ಸದಿ ಎನ್ನುವ ಬದಲು ಮುತ್ಸದ್ದಿ, ಕನ್ನಡ ಕುಲಪುರೋಹಿತ ಎನ್ನುವ ಬದಲು ಕನ್ನಡ ಕುಲ ಹೋಯಿತು ಎಂದು ಹೇಳಿದ್ದಾರೆ. ಅಂತೂ ಕನ್ನಡ ರಾಜ್ಯೋತ್ಸವ ದಿನದಂದೇ, ರಾಜ್ಯೋತ್ಸವ ಭಾಷಣ ಓದುವಾಗಲೇ ತಪ್ಪು ತಪ್ಪಾಗಿ ಓದಿ ಡಿಸಿಎಂ ಲಕ್ಷ್ಮಣ್ ಸವದಿ ತೀವ್ರ ಮುಜುಗರಕ್ಕೀಡಾಗಿದ್ದಾರೆ.

ಚಪ್ಪಲಿ ಧರಿಸಿ ಧ್ವಜಾರೋಹಣ:

ಡಿ.ಸಿ.ಎಮ್ ಲಕ್ಷ್ಮಣ ಸವದಿ ಇನ್ನೊಂದು ಎಡವಟ್ಟು ಮಾಡಿದ್ದಾರೆ. ಚಪ್ಪಲಿ ಧರಿಸಿ ದ್ವಜಾರೋಹಣ ಮಾಡಿದ ಸವದಿ ನಡೆಗೆ ಭಾರೀ ಅಕ್ರೋಶ ವ್ಯಕ್ತವಾಗಿದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ದ್ವಜಾರೋಹಣ ನಡೆಸುವ ವೇಳೆ ಡಿಸಿಎಂ ಚಪ್ಪಲಿ ತೆಗೆದಿರಲಿಲ್ಲ.

‘BSYಗೆ ತಾಕತ್ತಿದ್ದರೆ ರಾಜೀನಾಮೆ ನೀಡಲಿ ನೋಡೋಣ’