ಆಜಾದಿ ಕಾ ಅಮೃತ ಮಹೋತ್ಸವ್: ವಿಜಯಪುರದಲ್ಲಿ ಯುವಜನ ಸಂಕಲ್ಪ ನಡಿಗೆ

ಆಜಾದಿ ಕಾ ಅಮೃತ ಮಹೋತ್ಸವ್: ವಿಜಯಪುರದಲ್ಲಿ ಯುವಜನ ಸಂಕಲ್ಪ ನಡಿಗೆ

Published : Aug 05, 2022, 07:12 PM ISTUpdated : Aug 05, 2022, 07:15 PM IST

Azadi Ka Amrit Mahotsav: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಪುತ್ರ ಭರತಗೌಡರಿಂದ ಯುವಜನ ಸಂಕಲ್ಪ ನಡಿಗೆ ಶುರುವಾಗಿದೆ

ವಿಜಯಪುರ (ಆ. 05): ಆಜಾದಿ ಕಾ ಅಮೃತಮಹೋತ್ಸವ ಹಿನ್ನೆಲೆ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಪುತ್ರ ಭರತಗೌಡರಿಂದ ಯುವಜನ ಸಂಕಲ್ಪ ನಡಿಗೆ ಶುರುವಾಗಿದೆ. ಆಲಮಟ್ಟಿಯಿಂದ ತಾಳಿಕೋಟೆ ವರೆಗೆ 75 ಕಿಲೋ ಮೀಟರ್ ನಡಿಗೆ ಕಾರ್ಯಕ್ರಮ ಇದಾಗಿದ್ದು, ಸಾವಿರಾರು ವಿದ್ಯಾರ್ಥಿಗಳು, ಮಾಜಿ ಸೈನಿಕರು, ಶಿಕ್ಷಕರು, ಸರ್ಕಾರಿ ನೌಕರರು, ಯುವಕರು, ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ.

ಆಲಮಟ್ಟಿಯ ಹರ್ಡೇಕರ ಮಂಜಪ್ಪ ಸ್ಮಾರಕ ಭವನದಿಂದ ಯುವಜನ ಸಂಕಲ್ಪ ನಡಿಗೆಗೆ ಚಾಲನೆ ಸಿಕ್ಕಿದೆ. ಯುವಜನ ಸಂಕಲ್ಪ‌ ನಡಿಗೆಗೆ ಶ್ರೀಗಳು ಚಾಲನೆ ನೀಡಿದ್ದು,  ಇಂದಿನಿಂದ ಆಲಮಟ್ಟಿಯಿಂದ ತಾಳಿಕೋಟೆ ವರೆಗೆ 75 ಕೀ.ಮಿ 8 ದಿನಗಳ ನಡಿಗೆ ಇರಲಿದೆ. ಆಲಮಟ್ಟಿ, ಹುಲ್ಲೂರು ಗೆದ್ದಲಮರಿ, ಮುದ್ದೇಬಿಹಾಳ, ನಾಲ್ವತವಾಡ, ಮಿಣಜಗಿ ಮೂಲಕ ನಡಿಗೆ ತಾಳಿಕೋಟೆ ತಲುಪಲಿದೆ.  

ಸ್ವತಂತ್ರ್ಯ ಹೋರಾಟಗಾರರ ಜನ್ಮಭೂಮಿ ವಿಜಯಪುರದ ಚಡಚಣ

ಇಡೀ ಸಂಕಲ್ಪ‌ ನಡಿಗೆಯ ನೇತೃತ್ವವನ್ನು ನಡಹಳ್ಳಿ ಪುತ್ರ ಯುವ ಉದ್ಯಮಿ ಭರತಗೌಡ ಪಾಟೀಲ್ ವಹಿಸಿದ್ದಾರೆ. ಆಗಸ್ಟ್ 12ರಂದು ಯುವಜನ ಸಂಕಲ್ಪ ನಡಿಗೆ ತಾಳಿಕೋಟೆ ತಲುಪಲಿದೆ. ಈಗಾಗಲೇ ನಡಿಗೆಗಾಗಿ 25 ಸಾವಿರ ಯುವಕ, ಯುವತಿಯರಿಂದ ಆನ್ ಲೈನ್ ಕ್ಯೂ ಆರ್ ಕೋಡ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದಾರೆ.

ಯುವಕರಲ್ಲಿ ದೇಶ ಭಕ್ತಿಯ ಕಿಚ್ಚು ಹೆಚ್ಚಿಸೋದಕ್ಕೆ ಈ ಯುವಜನ ಸಂಕಲ್ಪ‌ ನಡಿಗೆ ಎಂದು ನಡಹಳ್ಳಿ ಪುತ್ರ ಭರತಗೌಡ ಎ ಪಾಟೀಲ್ ಹೇಳಿದ್ದಾರೆ.  ಯುವ ಜನರು ಯುವ ಜನ ಸಂಕಲ್ಪ ನಡಿಗೆಯಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು ಎಂದು ಶಾಸಕ ನಡಹಳ್ಳಿ ಕರೆ ನೀಡಿದ್ದಾರೆ. 

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more