Jan 14, 2022, 10:22 AM IST
ಉಡುಪಿ (ಜ. 14): ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂನಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಭಾಗದ ಯಕ್ಷಗಾನ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಕೊರೊನಾ 2 ನೇ ಅಲೆ ಬಳಿಕ ಸೋಂಕು ತಗ್ಗಿ, ಎಲ್ಲವೂ ಸಹಜ ಸ್ಥಿತಿಯತ್ತ ಬರುತ್ತಿತ್ತು.
ಯಕ್ಷಗಾನ ಕಲಾವಿದರೂ ತಿರುಗಾಟ ಆರಂಭಿಸಿದ್ದರು. ಎಲ್ಲವೂ ಸರಿಯಾಗುತ್ತಿದೆ ಎನ್ನುವಾಗ ಒಮಿಕ್ರೋನ್, ಕೋವಿಡ್ 3 ನೇ ಅಲೆಯಿಂದ ಮತ್ತೆ ಭೀತಿ ಶುರುವಾಗಿದೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಠಿಣ ನಿರ್ಬಂಧ, ರಾತ್ರಿ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವಿಧಿಸಿದೆ. ಇದರಿಂದ ಯಕ್ಷಗಾನ ಕಲಾವಿದರು ಮತ್ತೆ ಸಂಕಷ್ಟದಲ್ಲಿದ್ದಾರೆ. ನಿಯಮ ಪಾಲಿಸಿ ಕಾಲಮಿತಿಯೊಳಗೆ ಪ್ರದರ್ಶನಕ್ಕೆ ಅವಕಾಶ ಕೊಡಿ ಎಂದು ಕಲಾವಿದರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ಧಾರೆ.