ಯಕ್ಷಗಾನ ನಡೆಯುತ್ತಿರುವಾಗಲೇ ವೇದಿಕೆಯಲ್ಲಿ ಕುಸಿದುಬಿದ್ದ ಕಲಾವಿದ

Aug 10, 2021, 4:30 PM IST

ಮಂಗಳೂರು(ಆ.10): ವೇದಿಕೆಯಲ್ಲಿಯೇ ಯಕ್ಷಗಾನ ಕಲಾವಿದ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಮೂಡುಬಿದಿರೆಯ ಅಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಘಟನೆ ನಡೆದಿದೆ. ಯಕ್ಷಲೋಕದಲ್ಲಿ ಪ್ರಸಿದ್ಧ ಕಲಾವಿದ ಮೋಹನ್ ಕುಮಾರ್ ಅಮ್ಮುಂಜೆ ಕರ್ಣಪರ್ವದಲ್ಲಿ ಅರ್ಜುನ ಪಾತ್ರಧಾರಿಯಾಗಿ ವೇದಿಕೆಯಲ್ಲಿದ್ದಾಗ ಘಟನೆ ಸಂಭವಿಸಿದೆ.

ಯಕ್ಷಗಾನ ಮಾಡುವಾಗ ಕಲಾವಿದರಿಗೆ ದೈವ ಆವಾಹನೆ, ವಿಡಿಯೋ ವೈರಲ್..! 

ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದ ನಂತರ ನಿಧಾನವಾಗಿ ಯಕ್ಷಗಾನ ಪ್ರದರ್ಶನಗಳು ಆರಂಭಗೊಳ್ಳುತ್ತಿದ್ದು ಇದೀಗ ಯಕ್ಷಗಾನ ನಡೆಯುವಾಗಲೇ ಕಲಾವಿದ ಕುಸಿದುಬಿದ್ದ ವಿಡಿಯೋ ವೈರಲ್ ಆಗಿದೆ. ವೇದಿಕೆಯಲ್ಲಿದ್ದವರೂ ಈ ಅನಿರೀಕ್ಷಿತ ಘಟನೆಯಿಂದ ಹೆದರಿಕೊಂಡಿದ್ದಾರೆ. ಆದರೆ ಅಮ್ಮುಂಜೆ ಮೋಹನ ಅವರು ಕುಸಿದು ಬಿದ್ದಿರುವ ವಿಡಿಯೋ, ಎಲ್ಲೆಡೆ ವೈರಲ್ ಆಗುತ್ತಿದೆ. ಅಮ್ಮುಂಜೆಯವರ ಅಪಾರ ಸಂಖ್ಯೆಯ ಅಭಿಮಾನಿಗಳು,ಈ ದೃಶ್ಯ ಕಂಡು ಗಾಬರಿ ಗೊಂಡಿದ್ದರು. ಇದೀಗ ಸ್ವತಹ ಅಮ್ಮುಂಜೆ ಮೋಹನ ಅವರು, ಆಡಿಯೋ ಒಂದನ್ನು ಹರಿಯಬಿಟ್ಟಿದ್ದು. ನನಗೆ ಯಾವುದೇ ತೊಂದರೆಯಾಗಿಲ್ಲ, ನಾನು ಆರಾಮಾಗಿದ್ದೇನೆ. 5 ತಿಂಗಳ ಬಳಿಕ ವೇಷ ಮಾಡಿದ್ದರಿಂದ, ಕಣ್ಣಿಗೆ ಬೆಳಕು ಹೊಡೆಯುತ್ತಿದ್ದಂತೆ ತಲೆಸುತ್ತು ಬಂದಂತಾಯಿತು. ವೈದ್ಯರು ಆರೋಗ್ಯದ ಪರೀಕ್ಷೆ ನಡೆಸಿದ್ದು, ಬಿಪಿ ಶುಗರ್ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ, ಅಭಿಮಾನಿಗಳು ಗಾಬರಿಯಾಗುವುದು ಬೇಡ ಎಂದು ಹೇಳಿದ್ದಾರೆ.

ಪ್ರತಿದಿನ ಯಕ್ಷಗಾನ ಪ್ರದರ್ಶನ ನೀಡುವ ಕಲಾವಿದರು, ಕರೋನಾ ಲಾಕ್ಡೌನ್ ಆದನಂತರ, ಯಾವುದೇ ಪ್ರದರ್ಶನ ನೀಡಿರಲಿಲ್ಲ. ಇದೀಗ ಸೀಮಿತ ಪ್ರೇಕ್ಷಕರ ಮುಂದೆ, ಯೂಟ್ಯೂಬ್ ಪ್ರಸಾರಕ್ಕಾಗಿ ಯಕ್ಷಗಾನದ ದಾಖಲೀಕರಣ ಕೆಲವೆಡೆ ನಡೆಯುತ್ತಿದ್ದು, ಬಹಳ ಸಮಯದ ನಂತರ ಕಲಾವಿದರು ವೇಷ ಧರಿಸುತ್ತಿದ್ದಾರೆ.