ಕೋವಿಡ್‌ನಿಂದ ಉದ್ಯೋಗ ಹೋಯ್ತು, ಸ್ವಾವಲಂಬನೆಗಾಗಿ ಕೈ ಕೆಸರು ಮಾಡಿಕೊಂಡ ಶಿಕ್ಷಕ..!

Sep 8, 2021, 9:53 AM IST

ಯಾದಗಿರಿ (ಸೆ. 08):  ಕೋವಿಡ್‌ನಿಂದ ಉದ್ಯೋಗ ಕಳೆದುಕೊಂಡ ಖಾಸಗಿ ಶಾಲೆಯ ಚಿತ್ರಕಲಾ ಶಿಕ್ಷಕ  ಭೀಮೇಶ್ ಮಿರ್ಜಾಪುರ ಸ್ವಾವಲಂಬನೆಯ ಜೀವನಕ್ಕಾಗಿ ಗಣೇಶನ ಮೂರ್ತಿ ಕಲಾಕಾರನಾಗಿ ಕೆಲಸ ಮಾಡುತ್ತಿದ್ದಾರೆ. 

ಕೋವಿಡ್ ನಂತರ ಶಿಕ್ಷಕರ ವೃತ್ತಿ, ಬದುಕು ಹೇಗೆ ಬದಲಾಗಿದೆ? ಇವರು ಯಾವ ಯೋಧರಿಗೂ ಕಮ್ಮಿಯಿಲ್ಲ!

ಎರಡು ವರ್ಷದಿಂದ ಕೆಲಸವಿಲ್ಲದೇ ಖಾಲಿ ಕುಳಿತ  ಭೀಮೇಶ್ ಮಿರ್ಜಾಪುರ ಅವರು, ಮಣ್ಣಿನ ಗಣಪತಿ ತಯಾರಿಸಿ ತಾತ್ಕಾಲಿಕ ಉದ್ಯೋಗ ಕಂಡುಕೊಂಡಿದ್ದಾರೆ. ಸ್ನೇಹಿತರ ಆರ್ಥಿಕ ಸಹಾಯದಿಂದ ಬೆಂಗಳೂರಿನಿಂದ ಜೇಡಿಮಣ್ಣು ತರಿಸಿ ಪರಿಸರ ಸ್ನೇಹಿ ಗಣೇಶನ ಮೂರ್ತಿ ತಯಾರು ಮಾಡಿದ್ದಾರೆ.