ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ: ತಾಲೂಕು ಪಂಚಾಯತ್‌ ಕಚೇರಿಗೆ ಬೀಗ ಜಡಿದ ಮಹಿಳೆಯರು

Jan 27, 2020, 1:29 PM IST

ಬಾಗಲಕೋಟೆ(ಜ.27): ತಾಲೂಕಿನ ಶೀಗಿಕೇರಿ ಗ್ರಾಮಪಂಚಾಯತ್ ಪಿಡಿಓ ಹಾಗೂ ಶಿರಗುಪ್ಪಿ ತಾಂಡಾದ ಮಹಿಳಾ ಸಂಘದ ಸದಸ್ಯೆಯೊಬ್ಬರು ಸೇರಿ ಸರ್ಕಾರಿ ಗೋಮಾಳ ಜಾಗೆಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಮಹಿಳೆಯರು ಧರಣಿ ನಡೆಸಿದ್ದಾರೆ. ನಗರದ ತಾಲೂಕು ಪಂಚಾಯತ್ ಕಚೇರಿಗೆ ಬೀಗ ಜಡಿದು ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. 

ಪಿಡಿಓ, ಶಿರಗುಪ್ಪಿ ತಾಂಡಾದ ಮಹಿಳಾ ಸಂಘದ ಸದಸ್ಯೆಯೊಬ್ಬರು ಸೇರಿ ಸರ್ಕಾರಿ ಗೋಮಾಳ ಜಾಗೆ ಸೃಷ್ಟಿಸಿ ಜನರಿಗೆ ಉತಾರ ನೀಡುತ್ತಿದ್ದಾರೆ ಎಂದು ಪ್ರತಿಭಟನಾನಿರತ ಮಹಿಳೆಯರು ಆರೋಪಿಸಿದ್ದಾರೆ. ಇವರಿಬ್ಬರೂ ಸೇರಿಕೊಂಡು ಜನರಿಂದ ಲಕ್ಷ ಲಕ್ಷ ಲಂಚ ಪಡೆದಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.