May 11, 2020, 3:47 PM IST
ಬೆಂಗಳೂರು(ಮೇ.11):ಸೀಲ್‌ಡೌನ್‌ಗೆ ನಗರದ ಪಾದರಾಯನಪುರದ ಜನರು ತಲೆಕೆಡಿಸಿಕೊಳ್ಳುತ್ತಿಲ್ಲ. ಹೌದು, ಪೊಲೀಸರ ಮಾತಿಗೆ ಇಲ್ಲಿನ ಮಂದಿ ಬೆಲೆ ಕೊಡುತ್ತಿಲ್ಲ. ಬುದ್ದಿ ಮಾತು ಹೇಳಿದ ಪೊಲೀಸರ ಜೊತೆಗೆ ಜನರು ವಾಗ್ವಾದಕ್ಕಿಳಿದ ಘಟನೆ ಇಂದು(ಸೋಮವಾರ) ನಡೆದಿದೆ.
ಮತ್ತೊಬ್ಬ ಗರ್ಭಿಣಿಗೆ ಹೆರಿಗೆ ಬಳಿಕ ಕೊರೋನಾ ಪತ್ತೆ: ಆತಂಕದಲ್ಲಿ ಆಸ್ಪತ್ರೆ ಸಿಬ್ಬಂದಿ..!
ಪಾದರಾಯನಪುರದಲ್ಲಿ ಸೀಲ್‌ಡೌನ್ ಇದ್ರೂ ಕೂಡ ಜನರು ಮಾತ್ರ ಎಂದಿನಂತೆ ತಿರುಗಾಡುತ್ತಿದ್ದಾರೆ. ಹೀಗಾಗಿ ಜನರಿಗೆ ಬುದ್ದಿ ಹೇಳಲು ಹೋದ ಪೊಲೀಸರ ಜೊತೆಗೆ ಮಾತಿಗೆ ಮಾತು ಬೆಳೆಸಿದ್ದಾರೆ.