ಸಂಕ್ರಾಂತಿ ಹಬ್ಬ: ಇಳಕಲ್ ಸೀರೆಯುಟ್ಟು ಹೆಂಗಳೆಯರಿಂದ ಸಖತ್‌ ಸ್ಟೆಪ್!

Jan 13, 2020, 2:42 PM IST

ಬಾಗಲಕೋಟೆ(ಜ.13): ಜಿಲ್ಲೆಯ ಬೀಳಗಿ ತಾಲೂಕಿನ ಸುಕ್ಷೇತ್ರ ಚಿಕ್ಕಸಂಗಮದಲ್ಲಿ ಮುಧೋಳದ ಸಪ್ತಸ್ವರ ಸಂಗೀತ, ನೃತ್ಯ ,ಸಾಂಸ್ಕೃತಿಕ ಸಂಸ್ಥೆಯು ಸುಗ್ಗಿ-ಹುಗ್ಗಿ ಎಂಬ ಶಿರ್ಷೀಕೆಯಡಿ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಹೆಂಗಳೆಯರು ಸಾಂಪ್ರದಾಯಿಕ ಇಳಕಲ್ ಸೀರೆಯುಟ್ಟು ಸಖತ್‌ ಸ್ಟೆಪ್ ಹಾಕಿ ಸಂಭ್ರಮಪಟ್ಟಿದ್ದಾರೆ. 

ನಾನಾ ತರಹದ ಅಡುಗೆ ಸಿದ್ಧಪಡಿಸಿಕೊಂಡು ಹೊಲಗಳಿಗೆ ಹೋಗಿ ಬೆಳೆದ ಪೈರಿಗೆ ಪೂಜೆ ಸಲ್ಲಿಸುವ ವಾಡಿಕೆಯಂತೆ  ಮೆರವಣಿಗೆಯಲ್ಲಿ ಕೃಷ್ಣಾ ಮತ್ತು ಘಟಪ್ರಭೆಯರ ಸಂಗಮ ಸ್ಥಳಕ್ಕೆ ತೆರಳಿ ಗಂಗೆಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ದೇವಸ್ಥಾನಕ್ಕೆ ಆಗಮಿಸಿ ಚಿಕ್ಕಸಂಗಮನಾಥನಿಗೆ ಅಭಿಷೇಕ, ಪೂಜೆ ಸಲ್ಲಿಸಿದ ಬಳಿಕ ಮಹಿಳೆಯರೆಲ್ಲ ಭೋಜನ ಸವಿದಿದ್ದಾರೆ. ಈ ಕಾರ್ಯಕ್ರಮದಲ್ಲಿ ಯುವತಿಯರ ಬೈಕ್ ರೈಡಿಂಗ್ ಗಮನ ಸೆಳೆದಿದೆ.