Jan 22, 2021, 3:03 PM IST
ಕುಮಟಾ (ಜ. 22): ಮೀನುಗಾರರು, ಸಮುದ್ರಕ್ಕೆ ಮೀನುಗಾರಿಗೆ ಹೋದಾಗ, 11 ಅಡಿ ಉದ್ದ 350 ಕೆಜಿ ತೂಗುವ ಬೃಹತ್ ವೇಲ್ ಶಾರ್ಕ್ ಬಲೆಗೆ ಬಿದ್ದಿರುವ ಘಟನೆ ಕುಮಟಾ ತಾ. ಗೋಕರ್ಣ ತಡದಿ ಬಂದರಿನಲ್ಲಿ ನಡೆದಿದೆ.
ಈ ರೆಸ್ಟೋರೆಂಟ್ನಲ್ಲಿ ಬುಲೆಟ್ ಆಫರ್, ತಗೋಬೇಕು ಅಂದ್ರೆ ಎದುರಿಸಬೇಕು ಈ ಚಾಲೆಂಜ್..!
ಶಾರ್ಕ್ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬರುವುದರಿಂದ ಹಾಗೂ ಯಾರೂ ಕೂಡ ಆಹಾರಕ್ಕಾಗಿ ಬಳಸದ ಕಾರಣ ಮತ್ತೆ ಸಮುದ್ರಕ್ಕೆ ಬಿಡಲಾಗಿದೆ. ಗುಜರಾತ್ ಕಡಲಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಇವು, ಕರ್ನಾಟಕ ಅರಬ್ಬೀ ಸಮುದ್ರದ ಭಾಗದಲ್ಲೂ ಕಾಣಸಿಗುತ್ತವೆ. ಆದರೆ, ಇದು ಇತ್ತೀಚೆಗೆ ಬಹಳ ಅಪರೂಪವಾಗಿವೆ. ಸಣ್ಣ ಸಮುದ್ರ ಜೀವಿಗಳನ್ನು ಮತ್ತು ಮೀನಿನ ಮೊಟ್ಟೆಗಳನ್ನು ತಿಂದು ಬದುಕುವ ಇವು, ನಿಧಾನವಾಗಿ ಈಜುತ್ತವೆ.