Jul 2, 2020, 10:55 AM IST
ವಿಜಯಪುರ(ಜೂ): ರಾಜಕಾರಣದ ವಿರುದ್ಧ ಧೃವಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ವಿಜಯಪುರದಲ್ಲಿ ಒಂದಾಗಿವೆ. ಬಿಜೆಪಿ-ಕಾಂಗ್ರೆಸ್ ನಾಯಕರ ದೋಸ್ತಿಯಿಂದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಪಡೆಗೆ ಭರ್ಜರಿ ಗೆಲುವು ಸಿಕ್ಕಂತಾಗಿದೆ.
ಬಿಜೆಪಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ಹೌದು, ಇದೆಲ್ಲಾ ನಡೆದದ್ದು ವಿಜಯಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ. ಎಂ. ಬಿ. ಪಾಟೀಲ್ ದೋಸ್ತಿಗಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ನಾಯಕರು ಬಿಟ್ಟುಕೊಟ್ಟರಾ ಎನ್ನುವ ಅನುಮಾನ ಶುರುವಾಗಿದೆ.
ದೇಶದ ಐಕ್ಯತೆಗೆ ಒಂದೇ ಆಯ್ಕೆ, ಅದು ಕಾಂಗ್ರೆಸ್: ಡಿಕೆಶಿ
ವಿಜಯಪುರ ಜಿಲ್ಲಾ ಪಂಚಾಯತ್‌ನಲ್ಲಿ 20 ಸೀಟುಗಳನ್ನು ಹೊಂದಿದ್ದ ಬಿಜೆಪಿಗೆ ಅಧ್ಯಕ್ಷಗಾದಿ ಸಿಗಲಿಲ್ಲ, ಆದರೆ ಕೇವಲ 18 ಸ್ಥಾನಗಳನ್ನು ಹೊಂದಿರುವ ಕೈ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.