*ಹೈಕೋರ್ಟ್ ಆದೇಶಕ್ಕೂ ಮಣಿಯದ ಹೋರಾಟಗಾರರು
*ಶಾಲೆ ಬಳಿಕ ಈಗ ಕಾಲೇಜಲ್ಲಿ ಹಿಜಾಬ್ ಪ್ರತಿಭಟನೆ ತೀವ್ರ
*ವಿಜಯಪುರ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಹಿಜಾಬ್ ವಿವಾದ
ವಿಜಯಪುರ (ಫೆ. 17): ದಿನದಿಂದ ದಿನಕ್ಕೆ ರಾಜ್ಯಾದ್ಯಂತ ಹಿಜಾಬ್ ಗದ್ದಲ ಹೆಚ್ಚಾಗುತ್ತಿದ್ದು, ಶಾಲೆಗಳ ಬಳಿಕ ಇದೀಗ ಬುಧವಾರದಿಂದ ಪ್ರಾರಂಭವಾದ ಕಾಲೇಜುಗಳಿಗೂ ವಿಸ್ತರಿಸಿದೆ. ಇದೀಗೆ ವಿಜಯಪುರದ ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು ತರಗತಿಯಲ್ಲಿ ಹಿಜಾಬ್ ತೆಗೆಯಳು ವಿದ್ಯಾರ್ಥಿನಿಯರು ನಿರಾಕರಿಸಿದ್ದಾರೆ. ಈ ಬೆನ್ನಲ್ಲೇ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗದೆ ಮನೆಗೆ ತೆರಳಿದ್ದಾರೆ.
ಇದನ್ನೂ ಓದಿ: Hijab Row: ಹೆಣ್ಮಕ್ಕಳಿಗೆ ಶ್ರೇಷ್ಠ ಸ್ಥಾನ ಇರುವಲ್ಲಿ ಹಿಜಾಬ್ ಅಗತ್ಯವೇನಿದೆ? ವಿವಾದ ಸಂಬಂಧ ಪ್ರಜ್ಞಾ ಠಾಕೂರ್
"ನಮಗೆ ಹೀಜಾಬ್ ಮುಖ್ಯ: ಮುಂದಿನ ಪೀಳಿಗೆಗೆ ಬೇಕು, ಹಿಜಾಬ್ ತೆಗೆದು ಕ್ಲಾಸ್‌ಗೆ ಹೋಗಿ ಅಂತಾರೆ ನಾವು ಹೋಗಲ್ಲ" ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ಸಮವಸ್ತ್ರ ನಿಯಮವಿರುವ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಉಡುಗೆ-ತೊಡುಗೆಗಳನ್ನು ಧರಿಸುವಂತಿಲ್ಲ ಎಂಬ ಹೈಕೋರ್ಟಿನ ಕಡ್ಡಾಯ ಆದೇಶವನ್ನು ಉಲ್ಲಂಘಿಸಿದ ಪರಿಣಾಮ ಶಾಲಾ-ಕಾಲೇಜುಗಳಲ್ಲಿ ಗೊಂದಲವೇರ್ಪಟ್ಟಿದೆ.
ಶಿಕ್ಷಕರು, ಪೊಲೀಸರು ಮಾತ್ರವಲ್ಲದೆ ಸ್ಥಳಕ್ಕೆ ತಹಸೀಲ್ದಾರ್, ಜಿಲ್ಲಾಧಿಕಾರಿ, ಎಸ್ಪಿಗಳೇ ತೆರಳಿ ತಿಳಿವಳಿಕೆ ಹೇಳಿದರೂ ಕ್ಯಾರೇ ಎನ್ನದ ಕೆಲ ವಿದ್ಯಾರ್ಥಿನಿಯರು ಪ್ರಾಣ ಬಿಟ್ಟರೂ ಹಿಜಾಬ್ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಬೀದರ್, ಬಳ್ಳಾರಿ, ರಾಯಚೂರು, ಶಿವಮೊಗ್ಗ, ಚಿಕ್ಕಮಗಳೂರು, ವಿಜಯಪುರ, ಗದಗ, ತುಮಕೂರು ಸೇರಿದಂತೆ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬುಧವಾರ ಹಿಜಾಬ್‌ಪರ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ ನಡೆಸಿದ್ದಾರೆ.