3 ವರ್ಷವಾದ್ರೂ ಪೂರ್ಣಗೊಳ್ಳದ ಇನ್ಫೋಸಿಸ್ ಮನೆಗಳು, ಮನೆಗಾಗಿ ಕಾಯುತ್ತಿದ್ದಾರೆ ಸಂತ್ರಸ್ತರು.!

Sep 11, 2021, 11:53 AM IST

ಕೊಡಗು (ಸೆ. 11):  ಜಿಲ್ಲೆಯಲ್ಲಿ 2018ರಲ್ಲಿ ಎಂದೂ ಕಂಡು ಕೇಳರಿಯದಂಥ ಭೀಕರ ಜಲಸ್ಫೋಟ ಸಂಭವಿಸಿ ನೂರಾರು ಕುಟುಂಬಗಳು ಸೂರು ಕಳೆದುಕೊಂಡು ಬೀದಿಗೆ ಬರುವಂತಾಯಿತು. ಮನೆ ಕಳೆದುಕೊಂಡವರಿಗೆ ಸರ್ಕಾರದ ವತಿಯಿಂದ ಮನೆ ನೀಡುವುದಾಗಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಘೊಷಣೆ ಮಾಡಿದ್ದರು. ಅದರಂತೆ ಜಿಲ್ಲೆಯ ವಿವಿದೆಡೆ ಜಾಗ ಗುರುತು ಮಾಡಿ ಸರಕಾರ ಮನೆಗಳನ್ನು ನಿರ್ಮಾಣ ಮಾಡಿದೆ. ಇದುವರೆಗೂ ಒಟ್ಟು 666 ಮನೆಗಳನ್ನು  ನಿರ್ಮಾಣ ಮಾಡಿ ಈಗಾಗಲೆ ಸಂತ್ರಸ್ತರಿಗೆ ಹಂಚಿಕೆ ಮಾಡಲಾಗಿದೆ.

ಕೊಡಗು ಜಿಲ್ಲೆಯ ಜನರ ಅಂದಿನ ಸ್ಥಿತಿಯನ್ನು ಕಂಡು ಮರುಗಿದ ಇನ್ಫೋಸಿಸ್ನ ಸುಧಾಮೂರ್ತಿ ತಮ್ಮ ಸಂಸ್ಥೆ ವತಿಯಿಂದ 200 ಮನೆಗಳನ್ನು ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ್ದರು. ಅದರಂತೆ ನಿರ್ಮಾಣ ಕಾರ್ಯವೂ ಆರಂಭವಾಯಿತು. ಆದರೆ ಈವರೆಗೆ ಮನೆ ನಿರ್ಮಾಣ ಕಾರ್ಯ ಮಾರ್ತ ಪೂರ್ಣಗೊಂಡಿಲ್ಲ. ಪರಿಣಾಮ ಹಲವು ಸಂತ್ರಸ್ತರು ಮನೆಗಳಿಲ್ಲದೆ ಪರದಾಡುವಂತಾಗಿದೆ. ಅನೇಕರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.