ಕಡಿಮೆ ಬೆಲೆಗೆ ಬೈಕ್, ಕಾರು ಕೊಡಿಸ್ತೀನಿ ಎಂದು ಹಣ ಪಡೆದ ವ್ಯಕ್ತಿ ಜನರಿಗೆ ಮೋಸ ಮಾಡಿ ಊರನ್ನೇ ಬಿಟ್ಟಿದ್ದಾನೆ.
ಚಿಕ್ಕಮಗಳೂರು (ಸೆ. 23): ಕಡಿಮೆ ಬೆಲೆಗೆ ಬೈಕ್, ಕಾರು ಕೊಡಿಸ್ತೀನಿ ಎಂದು ಹಣ ಪಡೆದ ವ್ಯಕ್ತಿ ಜನರಿಗೆ ಮೋಸ ಮಾಡಿ ಊರನ್ನೇ ಬಿಟ್ಟಿದ್ದಾನೆ.
ಚಿಕ್ಕಮಗಳೂರಿನ ನಿವಾಸಿ ಅಜರ್ ಎಂಬಾತ, ಅಲ್ಲಿನ ಸ್ಥಳೀಯರಿಗೆ ಪರಿಚಿತ. ಕಡಿಮೆ ಬೆಲೆ ಸೆಕೆಂಡ್ ಹ್ಯಾಂಡ್ ಕಾರು, ಬೈಕ್ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆದಿದ್ದಾನೆ. ಅವುಗಳಿಗೆ ದಾಖಲೆಗಳನ್ನು ಕೊಡದೇ ಗಾಡಿ ಕೊಟ್ಟವರಿಗೆ ಹಣವನ್ನೇ ಕೊಡದೇ ಪರಾರಿಯಾಗಿದ್ದಾನೆ. ಗಾಡಿ ಖರೀದಿಸಿದವರಿಗೆ ಪೊಲೀಸ್ ಠಾಣೆಯಿಂದ ಕರೆಗಳು ಬರುತ್ತಿವೆ. ಗಾಡಿ ಖರೀದಿಸಿದವರಿಗೆ ಹಣ ಹೋಯ್ತು ದಾಖಲೆ ಇಲ್ಲ ಎಂಬ ಚಿಂತೆ, ಕೊಟ್ಟವರಿಗೆ ಇನ್ನೂ ಹಣ ಬಂದಿಲ್ಲ ಎಂಬ ಚಿಂತೆಯಲ್ಲಿದ್ದಾರೆ. ಅಜರ್ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.