ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭೂಕುಸಿತದ ಆತಂಕ, ಪರಿಸರ ತಜ್ಞರು ಹೇಳೋದೇನು.?

Sep 4, 2021, 3:31 PM IST

ಕಾರವಾರ (ಸೆ. 04): ಉತ್ತರಕನ್ನಡ ಜಿಲ್ಲೆಯಲ್ಲಿ ಜುಲೈ ಕೊನೆ ವಾರದಲ್ಲಿ ಸುರಿದ ಮಹಾಮಳೆಗೆ ಇಡೀ ಜಿಲ್ಲೆಯೇ ಅಸ್ತವ್ಯಸ್ತವಾಗಿತ್ತು. ಇದರೊಂದಿಗೆ ಭಾರೀ ಭೂ ಕುಸಿತವೂ ಉಂಟಾಗಿ ನೂರಾರು‌ ಜನರ ಅಸ್ತಿಪಾಸ್ತಿಗಳು ಮಣ್ಣು ಪಾಲಾಗಿದ್ದವು.

ಬೀದರ್: ಕೆಮಿಕಲ್ ಫ್ಯಾಕ್ಟರಿ ಹಟಾವ್, ಜನತಾ ಕೊ ಬಚಾವ್.! ಏನಿವರ ಸಮಸ್ಯೆ.?

ಈ ಕಾರಣದಿಂದಾಗಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಳೆ ಬಂತು ಎಂದರೆ ಜನರು ಹೆದರುವಂತಾಗಿದೆ. ಕೊಡಗು, ಚಿಕ್ಕಮಗಳೂರು ಮುಂತಾದೆಡೆ ಕಾಣಿಸಿಕೊಂಡಿದ್ದ ಮಹಾ ದುರಂತಗಳು ಇನ್ನು ಮುಂದೆ ಉತ್ತರ ಕನ್ನಡ ಜಿಲ್ಲೆಯಲ್ಲೂ  ಸಂಭವಿಸುವ ದಿನ ದೂರವಿಲ್ಲ ಎಂಬ ಮಾತು ಜನಸಾಮಾನ್ಯರಲ್ಲಿ ಹುಟ್ಟಿಕೊಂಡಿದೆ. ಹಾಗಾದರೆ ಈ ರೀತಿ ಸಂಭವಿಸುತ್ತಿರುವ ಸತತ ಭೂಕುಸಿತಗಳಿಗೆ ಕಾರಣವೇನು? ತಜ್ಞರು ಏನಂತಾರೆ.?