Nov 20, 2021, 12:54 PM IST
ಉಡುಪಿ (ನ. 20): ರಂಗದಮೇಲೆ ರಾಜರಂತೆ ಮೆರೆದವರೆಲ್ಲಾ, ಒಪ್ಪತ್ತಿನ ಊಟಕ್ಕೂ ಕಷ್ಟಪಡುವ ಸ್ಥಿತಿ ಇತ್ತು. ಅವಿಭಜಿತ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಎರಡೂವರೆ ಸಾವಿರಕ್ಕೂ ಅಧಿಕ ಯಕ್ಷಗಾನ ಕಲಾವಿದರು, ಪ್ರದರ್ಶನಕ್ಕೆ ಅವಕಾಶವಿಲ್ಲದೆ ಕಷ್ಟ ಅನುಭವಿಸುತ್ತಿದ್ದರು. ಇದೀಗ ಕೊರೋನಾ ಹದ್ದುಬಸ್ತಿಗೆ ಬಂದಿದೆ. ಯಕ್ಷಗಾನದ ರಂಗ ಮಂಚಕ್ಕೆ ಮತ್ತೆ ಜೀವ ಬಂದಿದೆ.
ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ವಿವಾದಾತ್ಮಕ ಹೇಳಿಕೆ, ದಲಿತರ ಜೊತೆ ನಾವಿದ್ದೇವೆ ಎಂದ ಶ್ರೀಗಳು
ಎರಡು ಜಿಲ್ಲೆಗಳ 50ಕ್ಕೂ ಅಧಿಕ ಯಕ್ಷಗಾನ ಮೇಳಗಳು (Yakshagana Mela) ತಿರುಗಾಟದ ತಯಾರಿ ಆರಂಭಿಸಿದೆ. ಕುಂದಾಪುರದ ಹಟ್ಟಿಯಂಗಡಿ ಮೇಳ ಈಗಾಗಲೇ ಪ್ರದರ್ಶನ ಯಾತ್ರೆ ಶುರು ಮಾಡಿದೆ. ರಾತ್ರಿಪೂರ್ತಿ ಪ್ರದರ್ಶನ, ಕಾಲಮಿತಿಯ ಪ್ರದರ್ಶನ ಗಳಿಗೆ ವೇದಿಕೆ ಸಿದ್ಧವಾಗಿದೆ. ಹರಕೆಯ ಬಯಲಾಟ ಗಳಿಗೂ ದೇವಸ್ಥಾನಗಳು ಸಜ್ಜಾಗಿದೆ. ದೇವರಿಗೆ ಹರಕೆ ಹೊತ್ತು ಬೆಳಕಿನ ಸೇವೆ ನೀಡಲು ಕಾಯುತ್ತಿದ್ದ ಭಕ್ತರಿಗೂ ಸಂತೋಷವಾಗಿದೆ. ಕೊನೆಗೂ ಕಷ್ಟ ಬಗೆಹರಿಯುವ ಲಕ್ಷಣಗಳು ಕಾಣುತ್ತಿವೆ. ಚೌಕಿ ಮನೆಯಲ್ಲಿ ಬಣ್ಣ- ರಂಗದ ಮೇಲೆ ಬೆಳಕು ಕಂಗೊಳಿಸುತ್ತಿದೆ. ಕರಾವಳಿಯ ಯಕ್ಷ ಪ್ರಿಯರು ಯಕ್ಷಗಾನಂ ಗೆಲ್ಗೆ ಎನ್ನುತ್ತಿದ್ದಾರೆ.