ರಾಜ್ಯದಲ್ಲಿ ಭುಗಿಲೆದ್ದಿರುವ ಧರ್ಮ ದಂಗಲ್ ನಡುವೆ ತುಮಕೂರಿನ ಕೊರಟಗೆರೆ ತಹಸೀಲ್ದಾರ್ ಸಾಮರಸ್ಯ ಮೆರೆದಿದ್ದಾರೆ.
ತುಮಕೂರು (ಏ. 12): ರಾಜ್ಯದಲ್ಲಿ ಭುಗಿಲೆದ್ದಿರುವ ಧರ್ಮ ದಂಗಲ್ ನಡುವೆ ತುಮಕೂರಿನ ಕೊರಟಗೆರೆ ತಹಸೀಲ್ದಾರ್ ಸಾಮರಸ್ಯ ಮೆರೆದಿದ್ದಾರೆ. ಸಿದ್ದರಬೆಟ್ಟದಲ್ಲಿ ಪೂಜೆ ಸಲ್ಲಿಸಿದ ತಹಸೀಲ್ದಾರ್ ನಹೀದಾ ಜಂಜಂ ಭಕ್ತರಿಗೆ ಊಟ ಬಡಿಸಿದ್ದಾರೆ. ಪ್ರತಿ ವರ್ಷ ಮುಜರಾಯಿ ಇಲಾಖೆಯಿಂದ ಸುಪ್ರಸಿದ್ಧ ಸಿದ್ಧರಬೆಟ್ಟದಲ್ಲಿ ಜಾತ್ರೋತ್ಸವ ನಡೆಯುತ್ತದೆ. ಈ ಜಾತ್ರಾ ಮಹೋತ್ಸವದಲ್ಲಿ ತಹಸೀಲ್ದಾರ್ ಪಾಲ್ಗೊಂಡಿದ್ದಾರೆ. ಸಿದ್ದರೆಬೆಟ್ಟದ ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ತಹಸೀಲ್ದಾರ್ ಆರತಿ ಬೆಳಗಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಹಿಂದು-ಮುಸ್ಲಿಂ ಧರ್ಮ ದಂಗಲ್, ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ