Aug 2, 2021, 9:59 AM IST
ತುಮಕೂರು (ಆ. 02): ವೈದ್ಯರ ನಿರ್ಲಕ್ಷ್ಯ ಆರೋಪದಿಂದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ತಿಪಟೂರು ನಗರದ ಜೇನುಕಲ್ ನರ್ಸಿಂಗ್ ಹೋಂನಲ್ಲಿ ನಡೆದಿದೆ. ತಿಪಟೂರು ತಾಲೂಕಿನ ಕುಂದೂರು ಗ್ರಾಮದ ನಿವಾಸಿ ಮಮತಾ (34) ಮೃತ ದುರ್ದೈವಿ. ಹೆರಿಗೆಗೆಂದು ಜುಲೈ 31 ರಂದು ಮಮತಾ ದಾಖಲಾಗಿದ್ದರು.
ಮೊದಲು ನಾರ್ಮಲ್ ಡೆಲಿವರಿ ಆಗುತ್ತೆ ಎಂದಿದ್ದ ವೈದ್ಯರು ಇದ್ದಕ್ಕಿದ್ದಂತೆ ಸೀಜೆರಿಯನ್ ಮಾಡಿದ್ದರು. ತಾಯಿ, ಮಗು ಆರೋಗ್ಯವಾಗಿದ್ದರು. ಆದರೆ ಚಿಕಿತ್ಸೆ ಆದ ಒಂದೇ ಗಂಟೆಗೆ ರಕ್ತ ವಾಂತಿ ಮಾಡಿಕೊಂಡು ಮಮತಾ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಮಮತಾ ಸಾವಿಗೆ ಕಾರಣ ಎಂದು ಪೋಷಕರ ಆಕ್ರೋಶ,ಆರೋಪ ಮಾಡಿದ್ದಾರೆ. ಆಸ್ಪತ್ರೆಯ ವಿರುದ್ಧ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.