Jan 7, 2020, 4:22 PM IST
ಮಂಡ್ಯ (ಜ.07): ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ನಾಶ ಮಾಡದೆ, ಮರಗಳನ್ನು ಉಳಿಸಿಕೊಳ್ಳಲು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮುಂದಾಗಿದೆ. ಶ್ರೀ ಮಠದ ಮಾದರಿ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿರುವ BGS ವೈದ್ಯಕೀಯ ಮಹಾವಿದ್ಯಾಲಯದ ಕ್ಯಾಂಪಸ್ ನಲ್ಲಿ ಮಲ್ಟಿ ಸ್ಷೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲಿದ್ದು, ಅಡ್ಡಿಯಾಗಿದ್ದ ಮರಗಳನ್ನು ಕಡಿಯದೇ ಬೇರೆಡೆಗೆ ಸ್ಥಳಾಂತರ ಮಾಡಲಾಯಿತು.
ಇದನ್ನೂ ನೋಡಿ | ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಣ್ಣೆದುರಲ್ಲೇ ನಡೆದು ಹೋಯಿತು ಪವಾಡ!...
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಜತೆಗೆ, ಲಕ್ಷಾಂತರ ರೂ. ಖರ್ಚು ಮಾಡಿ 250ಕ್ಕೂ ಹೆಚ್ಚು ಮರಗಳ ರಕ್ಷಣೆಗೆ ಮುಂದಾದ ನಿರ್ಮಲಾನಂದನಾಥ ಶ್ರೀಗಳ ನಡೆ ಈಗ ಸಮಾಜಕ್ಕೆ ಮಾದರಿಯಾಗಿದೆ.
ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳಿದ್ದಾಗ ನೆಟ್ಪು, ಪೋಷಣೆ ಮಾಡಿದ್ದ ಮರಗಳನ್ನು, ಆಧುನಿಕ ತಂತ್ರಜ್ಞಾನದ ಯಂತ್ರ ಬಳಸಿ ಬೇರಿಗೂ ಪೆಟ್ಟಾಗದಂತೆ, ವೈದ್ಯಕೀಯ ಕಾಲೇಜಿನಿಂದ ಅರ್ಧ ಕಿ.ಮೀ ದೂರದ BGS ಪಬ್ಲಿಕ್ ಶಾಲೆಗೆ ಸ್ಥಳಾಂತರ ಮಾಡಲಾಯಿತು.