ವಲಸೆ ಕಾರ್ಮಿಕರ ದಂಡು: ಕಲಬುರಗಿ ಗಡಿಯಲ್ಲಿ ನೋಂದಣಿಗೆ ಮುಗಿಬಿದ್ದ ಜನರು

May 21, 2020, 3:12 PM IST

ಕಲಬುರಗಿ(ಮೇ.21): ಸಾವಿರಾರು ಸಂಖ್ಯೆಯಲ್ಲಿರುವ ಕಾರ್ಮಿಕರು ನೋಂದಣಿಗಾಗಿ ಮುಗಿಬಿದ್ದ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಹಿರೋಳಿ ಗಡಿಯಲ್ಲಿ ಇಂದು(ಗುರುವಾರ) ನಡೆದಿದೆ. ಮುಂಬೈನಿಂದ ಕಲಬುರಗಿ ಜಿಲ್ಲೆಗೆ ಆಗಮಿಸಿದ ವಲಸೆ ಕಾರ್ಮಿಕರಿಗೆ ಯಾರಿಗೂ ಕೊರೋನಾ ಭಯವೇ ಇಲ್ವೇನೋ ಎಂಬಂತೆ ವರ್ತಿಸುತ್ತಿದ್ದಾರೆ. 

ರಾಜ್ಯದಲ್ಲಿ ಕೊರೋನಾ ಬಾಂಬ್‌ ಸ್ಫೋಟ: ಒಂದೇ ದಿನ 116 ಪಾಸಿಟಿವ್‌ ಕೇಸ್..!

ಕಾರ್ಮಿಕರು  ಯಾರೂ ಮಾಸ್ಕ್‌ ಧರಿಸಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಒಟ್ಟಿನಲ್ಲಿ ಇವರೆಲ್ಲರೂ ಸರ್ಕಾರದ ಲಾಕ್‌ಡೌನ್‌ ಆದೇಶಗಳನ್ನ ಗಾಳಿಗೆ ತೂರಿ ತಮ್ಮಿಷ್ಟದಂತೆ ವರ್ತಿಸುತ್ತಿದ್ದಾರೆ. ಇವರ ವರ್ತನೆಯಿಂದ ಆರೋಗ್ಯ ಇಲಾಖೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.