Sep 15, 2021, 9:45 PM IST
ಹೊನ್ನಾವರ(ಸೆ. 15) ದಿನ ಬೆಳಗಾದ್ರೆ ಸಾಕು ಶಾಲೆಗೆ ತೆರಳುವ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವೆಗೂ ಆ ಕಾಲು ಸಂಕದ ಮೇಲೆ ಸರ್ಕಸ್ ಮಾಡಬೇಕು. ಸಾಮಾನ್ಯವಾಗಿ ಈ ಕಾಲು ಸಂಕದಿಂದ ಆಯತಪ್ಪಿ ಬಿದ್ದು ಕೈ-ಕಾಲು ಮೂಳೆ ಮುರಿದುಕೊಂಡವರೇ ಹೆಚ್ಚಾಗಿದ್ರೂ, ಜೋರಾಗಿ ಮಳೆ ಸುರಿಯುವ ಸಂದರ್ಭದಲ್ಲಂತೂ ಇಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಸಾಗಬೇಕು. ಯಾಕಂದ್ರೆ, ಒಂದು ವೇಳೆ ಇಲ್ಲಿ ಬಿದ್ದರೆ ನೇರವಾಗಿ ಪಕ್ಕದಲ್ಲಿ ಹರಿಯುವ ಹೊಳೆಯಲ್ಲಿ ಕಾಣಸಿಗುತ್ತಾರೆ. ಅಷ್ಟಕ್ಕೂ ಈ ಗಂಭೀರ ಸಮಸ್ಯೆ ಇರೋದಾದ್ರೂ ಎಲ್ಲಿ ಅಂತೀರಾ...?
ಚಿನ್ನಾಭರಣ ಜತೆ ಗಣಪತಿ ವಿಸರ್ಜನೆ... ಮಾಸ್ಟರ್ ಪ್ಲಾನ್ ಮಾಡಿ ಕೊನೆಗೂ ಹೆಕ್ಕಿ ತೆಗೆದರು!
ಉತ್ತರ ಕನ್ನಡ ಜಿಲ್ಲೆಯ ಪರಿಸರದಲ್ಲಿ ನದಿ ತೊರೆಗಳಿಗೆ ಕಡಿಮೆ ಇಲ್ಲ. ಜನರಿಗೆ ಅತಿ ಅಗತ್ಯವಾದ ಜಾಗದಲ್ಲಿ ಸೇತುವೆ ನಿರ್ಮಾಣ ಮಾಡಲೇಬೇಕಕಿದೆ. ಜನರಿಗೆ ಅನುಕೀಲಕರವಾದ ಕೆಲಸವನ್ನು ಮಾಡಬೇಕು ಎಂಬ ಒತ್ತಾಯವನ್ನು ಜನಪ್ರತಿನಿಧಿಗಳಿಗೆ ಮಾಡಲಾಗುತ್ತಲೆ ಇರುತ್ತದೆ.