ಆನ್‌ಲೈನ್‌ ತರಗತಿಗೆ ಮಕ್ಕಳಿಂದಲೂ ವಿರೋಧ..!

Jul 8, 2020, 4:31 PM IST

ರಾಯಚೂರು(ಜು.08): ಆನ್‌ಲೈನ್ ಶಿಕ್ಷಣದಿಂದಾಗಿ ನಮಗೆ ಕಣ್ಣುನೋವು ಬರ್ತಾಯಿದೆ ಎಂದು ರಾಯಚೂರಿನ ವಿವಿಧ ಖಾಸಗಿ ಶಾಲೆಯ ವಿದ್ಯಾರ್ಥಿಗಳು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. 

ಶಿಕ್ಷಕರು ಪಾಠ ಮಾಡುವಾಗ ತುಂಬಾ ತೊಂದರೆಯಾಗುತ್ತೆ. ಕೆಲವೊಮ್ಮೆ ಸರಿಯಾಗಿ ನೆಟ್‌ವರ್ಕ್ ಸಿಗೊಲ್ಲ. ಪಾಠ ಮಾಡುವಾಗ ಆಡಿಯೋ ಕೂಡಾ ಕೇಳಿಸೊಲ್ಲ, ಇದರ ಜೊತೆಗೆ ನಮಗೆ ಕಣ್ಣು ನೋವು ಬರುತ್ತಿದೆ ಎಂದು ದೂರಿದ್ದಾರೆ.

ಶಾಲೆಯೊಳಗೇ ಟೀಚರ್ ಎಣ್ಣೆ ಪಾರ್ಟಿ..!

ಈ ಮೊದಲು ಪೋಷಕರ ವಲಯದಲ್ಲೇ ಆನ್‌ಲೈನ್ ತರಗತಿ ನಡೆಸುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ ವಿದ್ಯಾರ್ಥಿಗಳು ಅವರ ಮಾತುಗಳನ್ನೇ ಪುನರುಚ್ಚರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.