Jul 20, 2023, 3:26 PM IST
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು(CCB Police) ಬಂಧಿಸಿದ್ಧಾರೆ. ಈ ಉಗ್ರರು ಸಿಸಿಬಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿರುವುದೇ ಒಂದು ರೋಚಕ ಘಟನೆಯಾಗಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಎಕ್ಸ್‌ಕ್ಲೂಸಿವ್ ಮಾಹಿತಿ ನೀಡಲಿದೆ. ಪರಪ್ಪನ ಅಗ್ರಹಾರ(Parappana Agrahara) ಜೈಲಿನಲ್ಲಿದ್ದ ಒಬ್ಬನ ನಂಬರ್‌ನಿಂದ ಇವರು ಲಾಕ್ ಆಗಿದ್ದಾರೆ. ಫೋನ್ ಟ್ರ್ಯಾಪ್(phone tap) ಮೂಲಕ ಉಗ್ರರ ಕೃತ್ಯ ಬಯಲಾಗಿದೆ. ಮೊಬೈಲ್ ನಂಬರ್‌ನನ್ನು ಫೋನ್ ಟ್ಯಾಪ್‌ಗೆ ಐಬಿ(intelligence bureau) ಹಾಕಿತ್ತು. ಅಲ್ಲದೇ ಮೊಬೈಲ್‌ನ ಎಲ್ಲಾ ಸಂಭಾಷಣೆಯನ್ನು ಐಬಿ ಆಲಿಸುತ್ತಿತ್ತು. ಇದೀಗ ಉಗ್ರರಿಗೆ ಆಶ್ರಯ ಕೊಟ್ಟವರಿಗೆ ಪಿಕಲಾಟ ಶುರುವಾದ ಹಾಗೆ ಆಗಿದೆ. ಮನೆ ಮಾಲೀಕರು ಶಂಕಿತರ ಪೂರ್ವ ಪರ ತಿಳಿಯದೇ ಮನೆ ಕೊಟ್ಟಿದ್ದಾರೆ. ಯಾವುದೇ ರೂಲ್ಸ್ ಪಾಲಿಸದೇ ಮನೆಯನ್ನು ಕೊಡಲಾಗಿದೆ.
ಇದನ್ನೂ ವೀಕ್ಷಿಸಿ: ಉಗ್ರರ ಫ್ಯಾಕ್ಟರಿ ಆಗ್ತಿದ್ಯಾ ಜೈಲು..? : 2008 ರ ಸರಣಿ ಬಾಂಬ್ ಬ್ಲಾಸ್ಟ್ ಆರೋಪಿಗೆ ವಿಐಪಿ ಟ್ರೀಟ್‌ಮೆಂಟ್..!