Aug 30, 2021, 2:08 PM IST
ಉಡುಪಿ(ಆ.30): ಉಡುಪಿಯಲ್ಲಿ ಇಂದು ಸಂಭ್ರಮದ ಕೃಷ್ಣ ಜಯಂತಿ ನಡೆಯುತ್ತಿದೆ. ಮಂಗಳವಾರ ವಿಟ್ಲಪಿಂಡಿ ಉತ್ಸವ ಸಾಂಪ್ರದಾಯಿಕ ರೀತಿಯಲ್ಲಿ ನಡೆಯಲಿದೆ. ಕೋವಿಡ್ ಕಾರಣಕ್ಕೆ ಅದ್ದೂರಿ ಆಚರಣೆಗೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಹಾಗಾಗಿ ಜನಸಂದಣಿಗೆ ಅವಕಾಶವಿಲ್ಲದಂತೆ ಅಷ್ಟಮಿ ಆಚರಿಸುವ ಸವಾಲಿದೆ. ಇಂದು ಮತ್ತು 31 ಕ್ಕೆ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮಗಳು ನಡೆಯಲಿದೆ.
ಉಡುಪಿ ಕೃಷ್ಣ ಮಠದಲ್ಲಿ ಸರಳ ಸಾಂಪ್ರದಾಯಿಕ ಕೃಷ್ಣಾಷ್ಟಮಿ
ಈ ಬಾರಿ ಕೃಷ್ಣ ಭಕ್ತರಿಗೆ ವಿತರಣೆ ಮಾಡಲು 40 ಸಾವಿರ ಅಕ್ಕಿಯ ಚಕ್ಕುಲಿಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. 80 ಸಾವಿರ ವಿವಿಧ ಬಗೆಯ ಉಂಡೆಗಳನ್ನು ಮಠದ ಸಿಬ್ಬಂದಿ ರೆಡಿ ಮಾಡಿದ್ದಾರೆ. ಅನಾರೋಗ್ಯ ಪೀಡಿತ ಮಕ್ಕಳಿಗಾಗಿ ಹಣ ಸಂಗ್ರಹಿಸುವ ರವಿ ಕಟಪಾಡಿ ಅವರಿಗೆ ಮಾತ್ರ ವೇಷ ಧರಿಸಲು ಅವಕಾಶ ನೀಡಲಾಗಿದೆ. ರವಿ ಫ್ರೆಂಡ್ಸ್ ತಂಡದ ಎಲ್ಲರಿಗೂ ಕೊರೋನ ಟೆಸ್ಟ್ ಮಾಡಲಾಗಿದೆ. ವ್ಯಾಕ್ಸಿನ್ ಪಡೆದವರಿಗೆ ಮಾತ್ರ ಅವಕಾಶವನ್ನು ಕೊಡಲಾಗಿದೆ.